ADVERTISEMENT

ಪಾಂಡವಪುರ | ಬೈಕ್‌ಗಳ ನಡುವೆ ಅಪಘಾತ: ಸೆಸ್ಕ್ ಎಂಜಿನಿಯರ್ ಸಾವು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 4:59 IST
Last Updated 29 ಸೆಪ್ಟೆಂಬರ್ 2025, 4:59 IST
ಕಿರಣ್‌ ಕುಮಾರ್
ಕಿರಣ್‌ ಕುಮಾರ್   

ಪಾಂಡವಪುರ:ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ಸೆಸ್ಕ್ ಎಂಜಿನಿಯರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಪಾಂಡವಪುರ ಪಟ್ಟಣದ ಮೈಸೂರು ರಸ್ತೆ ಪೆಟ್ರೋಲ್ ಬಂಕ್ ಬಳಿ ಭಾನುವಾರ ನಡೆದಿದೆ.

ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಬಸವೇಗೌಡ ಅವರ ಪುತ್ರ, ಎಂಜಿನಿಯರ್ ಎ.ಬಿ.ಕಿರಣ್‌ ಕುಮಾರ್ (47) ಮೃತಪಟ್ಟವರು. ಮೃತ ಕಿರಣ್‌ಕುಮಾರ್ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಭಾನುವಾರ ಮಧ್ಯಾಹ್ನ ಎ.ಬಿ.ಕಿರಣ್‌ ಕುಮಾರ್ ಅವರು ಹರಳಹಳ್ಳಿ ಗ್ರಾಮದಿಂದ ಪಾಂಡವಪುರ ಪಟ್ಟಣದ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದರು. ಪಾಂಡವಪುರ–ಮೈಸೂರು ಮುಖ್ಯ ರಸ್ತೆಯ ಬಳಿ ಇರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪೆಟ್ರೋಲ್ ಬಂಕ್ ಮುಂಭಾಗ ಮೈಸೂರು ಕಡೆಯಿಂದ ಬಂದ ಬೈಕ್‌ ಡಿಕ್ಕಿ ಹೊಡೆದಿದೆ. ಕಿರಣ್‌ಕುಮಾರ್‌ಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿ, ಸ್ಥಳದಲ್ಲೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್‌ಗೆ ಡಿಕ್ಕಿ ಹೊಡದಿರುವ ಮತ್ತೊಂದು ಬೈಕ್ ಸವಾರನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತವಾಗಿರುವ ಈ ಸ್ಥಳದಲ್ಲಿ ಈ ಹಿಂದೆ ಎರಡು ಬೈಕ್‌ಗಳು ಅಪಘಾತಕ್ಕೀಡಾದ ಘಟನೆಗಳು ನಡೆದಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.