
ಹಲಗೂರು: ಆದಿ ಜಗದ್ಗರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವ ಈ ಬಾರಿ ಮಳವಳ್ಳಿ ಪಟ್ಟಣದಲ್ಲಿ ಡಿ.16 ರಿಂದ 22 ವರೆಗೂ ಜರುಗಲಿದೆ. 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಯಂತ್ಯುತ್ಸವಕ್ಕೆ ಡಿ.17 ರಂದು ರಾಷ್ಟ್ರಪತಿ ಆಗಮಿಸುತ್ತಿದ್ದಾರೆ ಎಂದು ಗವಿಮಠದ ಷಡಕ್ಷರ ಸ್ವಾಮೀಜಿ ಹೇಳಿದರು.
ಹಲಗೂರು ಪ್ರಮುಖ ವೃತ್ತಕ್ಕೆ ಬುಧವಾರ ಮಧ್ಯಾಹ್ನ ಆಗಮಿಸಿದ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು
ಜಯಂತ್ಯುತ್ಸವ ಆಚರಣೆ ನಮ್ಮ ತಾಲ್ಲೂಕಿಗೆ ಸಿಕ್ಕಿರುವುದು ಪುಣ್ಯ. ಕಾರ್ಯಕ್ರಮದಲ್ಲಿ ನಾಟಕ, ಮನರಂಜನೆ, ವಸ್ತು ಪ್ರದರ್ಶನ, ರೈತರ ಕೃಷಿ ಚಟುವಟಿಕೆಗಳ ವಸ್ತುಗಳನ್ನು ಪ್ರದರ್ಶನ ಇದ್ದು ಭಕ್ತರು ಸದುಪಯೋಗಪಡಿಸಿಕೊಳ್ಳಬೇಕು. ಡಿ.18ರಂದು ರಾಜ್ಯಪಾಲರು, ಡಿ.20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯದ ವಿವಿಧೆಡೆ ಗಳಿಂದ ಸ್ವಾಮಿಜೀಗಳು, ಸಚಿವರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
ಡಿ.ಹಲಸಹಳ್ಳಿ, ಬಾಣಸಮುದ್ರ, ಪುರದೊಡ್ಡಿ, ತೊರೆಕಾಡನಹಳ್ಳಿ, ಗೊಲ್ಲರಹಳ್ಳಿ, ಬ್ಯಾಡರಹಳ್ಳಿ, ಗಾಣಾಳು, ಕೊನ್ನಾಪುರ, ಲಿಂಗಪಟ್ಟಣ, ದಳವಾಯಿ ಕೋಡಿಹಳ್ಳಿ, ನಂದೀಪುರ, ಗುಂಡಾಪುರ ಸೇರಿದಂತೆ ಹಲಗೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗ್ರಾಮಸ್ಥರು ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಪ್ರಚಾರ ಸಮಿತಿ ಸದಸ್ಯರಾದ ಸೋಮಶೇಖರ್ ಸ್ವಾಮೀಜಿ, ಪ್ರಭುಲಿಂಗಸ್ವಾಮಿ, ಶ್ರೀಧರ್, ಶೇಖರ್, ಮಹದೇವಸ್ವಾಮಿ, ಚಂದ್ರಪ್ಪ, ಎಚ್.ಆರ್.ವಿಶ್ವ, ಎನ್.ಕೆ.ಕುಮಾರ್, ಪುಟ್ಟೇಗೌಡ, ಎ.ವಿ.ಟಿ ಕುಮಾರ್, ರಾಜೇಂದ್ರ, ಬೆಟ್ಟದಪ್ಪ, ಎಚ್.ಎನ್.ವಿರುಪಾಕ್ಷಮೂರ್ತಿ, ಅಬಿಜಿತ್, ಪರಮೇಶ, ಗಂಗಾಧರಸ್ವಾಮಿ, ಕಿರಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.