ADVERTISEMENT

ಪ್ರೊ.ಬಿ.ಷೇಕ್ ಅಲಿ ಅವರ ಕೃತಿ ಇತಿಹಾಸ ಬರೆಯುವವರಿಗೆ ಮಾದರಿ: ಜಯರಾಂ ರಾಯಪುರ

ಕರ್ನಾಟಕ ಜಲಸಾರಿಗೆ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಂ ರಾಯಪುರ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 14:31 IST
Last Updated 18 ಆಗಸ್ಟ್ 2024, 14:31 IST
ಕರ್ನಾಟಕ ಸಂಘದ ವತಿಯಿಂದ ಮೊದಲ ಬಾರಿಗೆ ಸ್ಥಾಪಿಸಿರುವ ಹ.ಕ.ರಾಜೇಗೌಡ ಅವರ ಹೆಸರಿನಲ್ಲಿ ಶೇಕ್‌ಅಲಿ ಅವರಿಗೆ ಮರಣೋತ್ತರವಾಗಿ ನೀಡಿದ ಪ್ರಶಸ್ತಿಯನ್ನು ಅವರ ಪುತ್ರ ಝಾಕೀರ್‌ ಹುಸೇನ್‌ ಅವರು ₹25 ಸಾವಿರ ಹಾಗೂ ಫಲಕದೊಡನೆ ಸ್ವೀಕರಿಸಿದರು. ನಿರ್ಮಲಾನಂದನಾಥ ಸ್ವಾಮೀಜಿ, ಜಯರಾಂ ರಾಯಪುರ, ಡಿ.ಕೆ.ರಾಜೇಂದ್ರ, ಪ್ರೊ.ಜಯಪ್ರಕಾಶಗೌಡ, ಲೋಕೇಶ್‌ ಚಂದಗಾಲು ಇತರರಿದ್ದಾರೆ
ಕರ್ನಾಟಕ ಸಂಘದ ವತಿಯಿಂದ ಮೊದಲ ಬಾರಿಗೆ ಸ್ಥಾಪಿಸಿರುವ ಹ.ಕ.ರಾಜೇಗೌಡ ಅವರ ಹೆಸರಿನಲ್ಲಿ ಶೇಕ್‌ಅಲಿ ಅವರಿಗೆ ಮರಣೋತ್ತರವಾಗಿ ನೀಡಿದ ಪ್ರಶಸ್ತಿಯನ್ನು ಅವರ ಪುತ್ರ ಝಾಕೀರ್‌ ಹುಸೇನ್‌ ಅವರು ₹25 ಸಾವಿರ ಹಾಗೂ ಫಲಕದೊಡನೆ ಸ್ವೀಕರಿಸಿದರು. ನಿರ್ಮಲಾನಂದನಾಥ ಸ್ವಾಮೀಜಿ, ಜಯರಾಂ ರಾಯಪುರ, ಡಿ.ಕೆ.ರಾಜೇಂದ್ರ, ಪ್ರೊ.ಜಯಪ್ರಕಾಶಗೌಡ, ಲೋಕೇಶ್‌ ಚಂದಗಾಲು ಇತರರಿದ್ದಾರೆ   

ಮಂಡ್ಯ: ‘ಶಾಸನಕ್ಕೆ ಸಾಂಸ್ಕೃತಿಕ ಇತಿಹಾಸ ಇರುತ್ತದೆ, ಇದನ್ನು ಓದಬೇಕಾದರೆ ಸಂಸ್ಕೃತ, ಕನ್ನಡ, ತಮಿಳು, ಪ್ರಾಕೃತ ಭಾಷೆಗಳು ಬರಬೇಕು. ಇವೆಲ್ಲವನ್ನು ಆಮೂಲಾಗ್ರವಾಗಿ ನೋಡುತ್ತಿದ್ದ ಪ್ರೊ.ಬಿ.ಷೇಕ್ ಅಲಿ ಅವರ ಕೃತಿಯು ಇತಿಹಾಸ ಬರೆಯುವವರಿಗೆ ಮಾದರಿಯಾಗಿದೆ’ ಎಂದು ಕರ್ನಾಟಕ ಜಲಸಾರಿಗೆ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಂ ರಾಯಪುರ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಹ.ಕ. ರಾಜೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗಂಗ ಸಾಮ್ರಾಜ್ಯದ ಬಗ್ಗೆ ಅವರು ಮಾತನಾಡಿದರು.

‘ವಿಶ್ವದ ಇತಿಹಾಸದಲ್ಲಿ 650ರಿಂದ 700 ವರ್ಷಗಳಲ್ಲಿ ಒಂದು ರಾಜವಂಶಸ್ಥ ಆಳಿದ ಇತಿಹಾಸ ಸಿಗುವುದಿಲ್ಲ. ಒಂದು ಅಪರೂಪವಾದಂತಹ ಗಂಗರ ಬಗ್ಗೆ ಕನ್ನಡಿಗರು ಓದಲು ಒಂದು ಹಸ್ತಪ್ರತಿ ಇಲ್ಲ ಎನ್ನುವುದು ಬೇಸರದ ಸಂಗತಿ. ಇದನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಮೂಲಕ ಇದಕ್ಕೆ ನಾಂದಿ ಹಾಡಬೇಕಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಲೇಖಕ ಡಿ.ಕೆ.ರಾಜೇಂದ್ರ ಮಾತನಾಡಿ, ‘ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರಿನಲ್ಲಿ ಪೇಟೆಗಳು, ನಗರ, ಗೋಪುರಗಳು, ಕೆರೆ ಕಟ್ಟೆಗಳ ನಿರ್ಮಾಣ ಸೇರಿದಂತೆ ಹಲವು ಜನರಪರ ಯೋಜನೆಗಳನ್ನು ವ್ಯವಸ್ಥಿತವಾಗಿ ಮಾಡಿದ್ದನ್ನು ನೋಡಿದರೆ ಅವರ ದೂರದೃಷ್ಟಿತ್ವ ಕಾಣ ಸಿಗುತ್ತದೆ. ಕೆಂಪೇಗೌಡರನ್ನು ಮರೆಯದಂತೆ ನೋಡಿಕೊಳ್ಳಬೇಕಾದರೆ ಇದನ್ನು ಯುವ ಜನಾಂಗಕ್ಕೆ ತಿಳಿಸಬೇಕು. ರಾಜೇಗೌಡರು ಬದುಕಿದ್ದ ಸಂದರ್ಭದಲ್ಲಿ ಸುಮಾರು 60 ಪುಸ್ತಕಗಳು ಹೊರ ಬಂದವು. ಇವರು ಒಂದು ರೀತಿ ಮಂಡ್ಯ ಜಿಲ್ಲೆಯ ಸಾಧಕರ ಬಗ್ಗೆ ಬೆಳಕು ಬೀರಿದರು. ಜೊತೆಗೆ ಸಂಸ್ಕೃತಿ ದಾಖಲಿಸಿದ್ದಾರೆ’ ಎಂದು ವಿವರಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ‘ಸಾರುವ ಕೆಲಸವನ್ನು ಬಹಳ ಹಗುರವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಆ ಕೆಲಸ ಜನರನ್ನು ಎಚ್ಚೆತ್ತುಕೊಳ್ಳುವಂತೆ ಮಾಡುತ್ತದೆ. ಜಾತಿ, ತತ್ವ, ಪ್ರದೇಶ, ಮೇಲು, ಕೀಳು ಎಂಬುವುದು ಇರುವುದಿಲ್ಲ, ಇವೆಲ್ಲಕ್ಕಿಂತ ಮಿಗಿಲಾಗಿ ಹ.ಕ.ರಾಜೇಗೌಡರು ಸಾರುವ ಕೆಲಸವನ್ನು ಮಾಡಿದರು, ಜೊತೆಗೆ ಸಾಹಿತ್ಯ, ಸಾಮಾಜಿಕ, ಶಿಕ್ಷಣ ಕ್ಷೇತ್ರದಲ್ಲಿ ಯಾರು ಕೆಲಸ ಮಾಡಿದರು ಎಂಬುವ ವಿಚಾರನವನ್ನು ರವಾನಿಸುವ ಕೆಲಸ ಮಾಡಿ ಮತ್ತೊಂದು ತಲೆಮಾರಿಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲಬೇಕು’ ಎಂದು ಶ್ಲಾಘಿಸಿದರು.

ಕರ್ನಾಟಕ ಸಂಘವು ಹ.ಕ.ರಾಜೇಗೌಡ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಯನ್ನು ಪ್ರೊ.ಬಿ.ಷೇಕ್ ಅಲಿ ಅವರಿಗೆ ಮರಣೋತ್ತರವಾಗಿ ನೀಡಿದ್ದು, ಅವರ ಪುತ್ರ ಝಾಕೀರ್‌ ಹುಸೇನ್‌ ಅವರು ₹25 ಸಾವಿರ ಹಾಗೂ ಫಲಕದೊಡನೆ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಹ.ಕ.ರಾಜೇಗೌಡ ಅವರ ಪುತ್ರ ಎಚ್‌.ಆರ್‌. ದಿನೇಶ್‌ಚಂದ್ರ, ಪುತ್ರಿ ಡಾ.ಚೇತನಾ, ಕರ್ನಾಟಕ ಸಂಘದ ಕಾರ್ಯದರ್ಶಿ ಚಂದಗಾಲು ಲೋಕೇಶ್‌ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಕರ್ನಾಟಕ ಸಂಘದ ವತಿಯಿಂದ ಮೊದಲ ಬಾರಿಗೆ ಸ್ಥಾಪಿಸಿರುವ ಹ.ಕ.ರಾಜೇಗೌಡ ಅವರ ಹೆಸರಿನಲ್ಲಿ ಶೇಕ್‌ಅಲಿ ಅವರಿಗೆ ಮರಣೋತ್ತರವಾಗಿ ನೀಡಿದ ಪ್ರಶಸ್ತಿಯನ್ನು ಅವರ ಪುತ್ರ ಝಾಕೀರ್‌ ಹುಸೇನ್‌ ಅವರು ₹25 ಸಾವಿರ ಹಾಗೂ ಫಲಕದೊಡನೆ ಸ್ವೀಕರಿಸಿದರು. ನಿರ್ಮಲಾನಂದನಾಥ ಸ್ವಾಮೀಜಿ ಜಯರಾಂ ರಾಯಪುರ ಡಿ.ಕೆ.ರಾಜೇಂದ್ರ ಪ್ರೊ.ಜಯಪ್ರಕಾಶಗೌಡ ಲೋಕೇಶ್‌ ಚಂದಗಾಲು ಇತರರಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.