ADVERTISEMENT

ಶಿವರಾಮೇಗೌಡ ಮನೆ ಎದುರು ಪ್ರತಿಭಟನೆ

ಅಂಬರೀಷ್‌ ಬಗ್ಗೆ ಅವಹೇಳನಕಾರಿ ಹೇಳಿಕೆ: ಜಾಲತಾಣದಲ್ಲಿ ಹರಿದಾಡಿದ ಆಡಿಯೊ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 5:24 IST
Last Updated 30 ಜನವರಿ 2026, 5:24 IST
ಬೇಲೂರು ಸೋಮಶೇಖರ್‌
ಬೇಲೂರು ಸೋಮಶೇಖರ್‌   

ಮಂಡ್ಯ: ‘ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ ಅವರು ಕಾವೇರಿ ಹೋರಾಟಗಾರ ಜಿ. ಮಾದೇಗೌಡ, ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ಚಲನಚಿತ್ರ ನಟ ಅಂಬರೀಷ್‌ ಅವರು ಸೇರಿದಂತೆ ಹಲವು ನಾಯಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಇದನ್ನು ವಿರೋಧಿಸಿ ಅವರ ನಿವಾಸದ ಎದುರು ಬೆಂಗಳೂರಿನಲ್ಲಿ ಜ.30ರಂದು ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ಅಖಿಲ ಕರ್ನಾಟಕ ಅಂಬರೀಷ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್‌ ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಲು ಅಂಬರೀಷ್‌ ಕಾಲುಕಟ್ಟಿಕೊಂಡ ದಿನಗಳನ್ನು ಶಿವರಾಮೇಗೌಡ ಅವರು ಮರೆತಿದ್ದಾರೆ. ಅವರ ಹೆಸರು ಹೇಳಿಕೊಂಡೇ ಅಧಿಕಾರ, ಹಣ ಮಾಡಿಕೊಂಡು ಈಗ ಅಂಬರೀಷ್‌ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಬಿಡಬೇಕು. ರೈತಪರ ಹೋರಾಟಗಾರರಾದ ಜಿ.ಮಾದೇಗೌಡ ಅವರ ಬಗ್ಗೆಯೂ ಲಘುವಾಗಿ ಮಾತನಾಡಿರುವ ಇವರ ವಿರುದ್ಧ ಮಂಡ್ಯ ಮತ್ತು ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡುತ್ತಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ತಕ್ಷಣ ಕ್ಷಮೆ ಕೇಳದಿದ್ದರೆ ಹಾಗೂ ಪೊಲೀಸರು ಕ್ರಮ ವಹಿಸದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT
ಎಲ್‌.ಆರ್‌.ಶಿವರಾಮೇಗೌಡ

‘ಮಾತನಾಡಿರುವುದು ನಾನಲ್ಲ’ ‘

ನಾಗಮಂಗಲದ ಜೆಡಿಎಸ್‌ ಕಾರ್ಯಕರ್ತನ ಜೊತೆ ನಾನು ಮಾತನಾಡಿದ್ದೇ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ ಆಡಿಯೊದಲ್ಲಿರುವ ಮಾತುಗಳು ಸತ್ಯಕ್ಕೆ ದೂರವಾದವು. ಅದಲ್ಲಿರುವ ಬಹುತೇಕ ಮಾತುಗಳನ್ನು ನಾನು ಹೇಳಿಲ್ಲ. ಬೇಕಾದ ರೀತಿಯಲ್ಲಿ ತಿರುಚಿ ಆಡಿಯೊ ಹರಿಬಿಡಲಾಗಿದೆ. ಇದು ಯಾರೋ ಪಿತೂರಿ ಮಾಡಿದ್ದಾರೆ ಇದರ ವಿರುದ್ಧ ಕಾನೂನು ಹೋರಾಟ ನಡೆಸುವೆ’ ಎಂದು ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ ಪ್ರತಿಕ್ರಿಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.