ADVERTISEMENT

ಪಿಯುಸಿ ಫಲಿತಾಂಶ: ಅಭಿಲಾಷಾ, ರಕ್ಷಾ, ಅಮೃತ್‌ ಮಂಡ್ಯ ಜಿಲ್ಲೆಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 16:53 IST
Last Updated 15 ಜುಲೈ 2020, 16:53 IST
ರಕ್ಷಾ ಜೈನ್‌
ರಕ್ಷಾ ಜೈನ್‌   

ಮಂಡ್ಯ: ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ನಗರದ ಕಾನ್‌ಕಾರ್ಡ್‌ ಮಹೇಶ್‌ ಪಿಯು ಕಾಲೇಜಿನ ವಿದ್ಯಾರ್ಥಿ ರಕ್ಷಾ ಜೈನ್‌ (590), ವಿಜ್ಞಾನ ವಿಭಾಗದಲ್ಲಿ ಮಾಂಡವ್ಯ ಎಕ್ಸಲೆನ್ಸ್‌ ಕಾಲೇಜಿನ ಎಂ.ಎಚ್‌.ಅಮೃತ್‌ (589), ಕಲಾ ವಿಭಾಗದಲ್ಲಿ ಮದ್ದೂರು ತಾಲ್ಲೂಕು ಬೆಕ್ಕಳಲೆ ಗಾಂಧಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಟಿ.ಆರ್‌.ಅಭಿಲಾಷಾ (560) ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಪಿ.ಹೊಸಹಳ್ಳಿಯ ಆರಾಧನಾ ಪಿಯು ಕಾಲೇಜು, ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿಯ ಕಾವೇರಿ ಎಕ್ಸೆಲ್‌ ಪಿಯು ಕಾಲೇಜು, ನಾಗಮಂಗಲ, ಬಿ.ಜಿ ನಗರದ ಬಿಜಿಎಸ್‌ ಪಿಯು ಕಾಲೇಜು, ಪಾಂಡವಪುರದ ಚಿನಕುರಳಿಯ ಎಸ್‌ಟಿಜಿ ಪಿಯು ಕಾಲೇಜು, ಮದ್ದೂರಿನ ಸೇಂಟ್‌ ಆನ್ಸ್‌ ಪಿಯು ಕಾಲೇಜು ಶೇ 100 ರಷ್ಟು ಫಲಿತಾಂಶ ಪಡೆದ ಅನುದಾನ ರಹಿತ ಕಾಲೇಜುಗಳಾಗಿದೆ. ಜಿಲ್ಲೆಯಲ್ಲಿ ಯಾವುದೇ ಕಾಲೇಜು ಶೂನ್ಯ ಫಲಿತಾಂಶ ಪಡೆದಿಲ್ಲ ಎಂದು ಡಿಡಿಪಿಯು ಗುರುಸ್ವಾಮಿ ತಿಳಿಸಿದ್ದಾರೆ.

ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿಯ ಸರ್ಕಾರಿ ಪಿಯು ಕಾಲೇಜು (ಶೇ 95.2) ಅತಿ ಹೆಚ್ಚು ಫಲಿತಾಂಶ ಪಡೆದಿದ್ದರೆ, ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಶಿವಕುಮಾರ ಸ್ವಾಮಿ ಪಿಯು ಕಾಲೇಜು (ಶೇ 94.7)ಅತಿ ಹೆಚ್ಚು ಫಲಿತಾಂಶ ಪಡೆದ ಖಾಸಗಿ ಅನುದಾನಿತ ಕಾಲೇಜಾಗಿವೆ.

ADVERTISEMENT

ಪಾಂಡವಪುರ ತಾಲ್ಲೂಕಿನ ಚಿಕ್ಕ ಬ್ಯಾಡರಹಳ್ಳಿಯ ಸರ್ಕಾರಿ ಪಿಯು ಕಾಲೇಜು (ಶೇ 18.2) ಅತೀ ಕಡಿಮೆ ಫಲಿತಾಂಶ ಪಡೆದ ಸರ್ಕಾರಿ ಕಾಲೇಜಾಗಿದೆ. ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯ ಎಸ್‌ಸಿಎಂಎಂ ಪಿಯು ಕಾಲೇಜು (ಶೇ 28.9) ಅತೀ ಕಡಿಮೆ ಫಲಿತಾಂಶ ಪಡೆದ ಅನುದಾನಿತ ಹಾಗೂ ಮಳವಳ್ಳಿ ತಾಲ್ಲೂಕಿನ ಭಗವಾನ್‌ ಬುದ್ಧ ಪಿಯು ಕಾಲೇಜು (ಶೇ 9.1) ಅತಿ ಕಡಿಮೆ ಫಲಿತಾಂಶ ಪಡೆದ ಅನುದಾನರಹಿತ ಖಾಸಗಿ ಪಿಯು ಕಾಲೇಜಾಗಿವೆ.
ಮಂಡ್ಯ ನಗರದ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 99ರಷ್ಟು ಫಲಿತಾಂಶ ಪಡೆದಿದೆ.

ಕಾಲೇಜಿನ ಒಟ್ಟು 352 ವಿದ್ಯಾರ್ಥಿಗಳಲ್ಲಿ 348 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 130 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 205 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗ: ಟಿ.ಆರ್‌.ಅಭಿಲಾಷಾ (560) ಪ್ರಥಮ. ಮಂಡ್ಯ ತಾಲ್ಲೂಕಿನ ಮಂಗಲ ಸರ್ಕಾರಿ ಪಿಯು ಕಾಲೇಜಿನ ಈ.ರಮ್ಯಾ (559) ದ್ವಿತೀಯ, ಮಂಡ್ಯದ ಅರ್ಕೇಶ್ವರನಗರ ಸರ್ಕಾರಿ ಪಿಯು ಕಾಲೇಜಿನ ಬಿ.ಸಿ.ಸುಜಾತಾ (557) ತೃತೀಯ.

ವಾಣಿಜ್ಯ ವಿಭಾಗ: ರಕ್ಷಾ ಜೈನ್‌ (590) ಪ್ರಥಮ, ಮಂಡ್ಯದ ಕಾರ್ಮೆಲ್‌ ಪಿಯು ಕಾಲೇಜಿನ ವಿಧಿ ಎಚ್‌. ಜೈನ್‌ (585) ದ್ವಿತೀಯ, ಯಶ್ಸಿ ಜೈನ್‌ (581) ತೃತೀಯ.
ವಿಜ್ಞಾನ ವಿಭಾಗ: ಎಂ.ಎಚ್‌.ಅಮೃತ (589) ಪ್ರಥಮ, ಎಂ.ಎಸ್‌.ರಾಘವೇಂದ್ರ (588) ದ್ವಿತೀಯ, ಕೆ.ಆರ್‌.ಪೇಟೆಯ ಕ್ರೈಸ್ಟ್‌ ಪಿಯು ಕಾಲೇಜಿನ ಕೆ.ಸ್ನೇಹ (586) ತೃತೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.