ADVERTISEMENT

ಮಂಡ್ಯ | ರಾಜು ಕೊಲೆ ಪ್ರಕರಣ: ಏಳು ಪೌರಕಾರ್ಮಿಕರು ಆರೋಪದಿಂದ ಮುಕ್ತ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:09 IST
Last Updated 25 ಜುಲೈ 2025, 2:09 IST
ಕೋರ್ಟ್ ತೀರ್ಪು
ಕೋರ್ಟ್ ತೀರ್ಪು   

ಮಂಡ್ಯ: ರಾಜು ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ನಗರದ ಗೂಬೆಹಳ್ಳದ ಪೌರಕಾರ್ಮಿಕರಾದ ಏಳು ಮಂದಿ ಕೊಲೆ ಆರೋಪದಿಂದ ಮುಕ್ತರಾಗಿದ್ದಾರೆ. 

2015 ಆಗಸ್ಟ್‌ 15ರಂದು ಗೂಬೆಹಳ್ಳದ ಕಿರಾಣಿ ಅಂಗಡಿ ಬಳಿ ರಾಜುವಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಗಾಯಗೊಂಡ ರಾಜುವನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. 

ಈ ಆರೋಪಕ್ಕೆ ಸಂಬಂಧಪಟ್ಟಂತೆ ರಘು, ಕಾರ್ತಿಕ್‌, ಸತೀಶ್‌, ರಾಜು, ಗುರು, ಶಂಕರ, ನಾಗರಾಜು ಅವರ ಮೇಲೆ ಮಂಡ್ಯ ಪೂರ್ವ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ADVERTISEMENT

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಹತ್ತು ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆದಿತ್ತು. ನ್ಯಾಯಾಧೀಶರಾದ ಜೆ.ಎನ್‌. ಸುಬ್ರಹ್ಮಣ್ಯ ಅವರು ಏಳು ಮಂದಿಯನ್ನು ಆರೋಪದಿಂದ ಮುಕ್ತಗೊಳಿಸಿ ಆದೇಶಿಸಿದ್ದಾರೆ.  

ವಕೀಲ ಬಿ.ಟಿ. ವಿಶ್ವನಾಥ್‌ ಅವರು ಏಳು ಜನರ ಪರವಾಗಿ ವಾದ ಮಂಡಿಸಿದ್ದರು. ಅವರೊಂದಿಗೆ ಕಿರಿಯ ಸಹೋದ್ಯೋಗಿಗಳಾದ ಪಲ್ಲವಿ, ಕಿಶೋರ್‌, ಚೇತನ್‌, ಆಕಾಶ್‌ ಅವರು ಸಹಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.