ಬೆಳಕವಾಡಿ: ಸಮೀಪದ ಪೂರಿಗಾಲಿ ಗ್ರಾಮದ ಶ್ರೀ ರಾಮ ಸೇವಾ ಸಮಿತಿಯಿಂದ ರಾಮನವಮಿ ಅಂಗವಾಗಿ ಭಾನುವಾರ ದೇವರಿಗೆ ವಿಶೇಷ ಪೂಜೆ ಕೈಂಕರ್ಯಗಳನ್ನು ನಡೆಸಲಾಯಿತು.
ಗ್ರಾಮದ ರಾಮ ಮಂದಿರದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾ ಮತ್ತು ಆಂಜನೇಯಸ್ವಾಮಿ ದೇವರ ಭಾವಚಿತ್ರಕ್ಕೆ ವಿವಿಧ ಹೂವು, ತುಳಸಿ, ವೀಳ್ಯದೆಲೆ ಹಾರದಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವನ್ನು ಅರ್ಚಕ ಮಂಟೇಸ್ವಾಮಿ ನೆರವೇರಿಸಿದರು.
ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.