
ಶ್ರೀರಂಗಪಟ್ಟಣ: ತಾಲ್ಲೂಕಿನ ಚಂದಗಿರಿಕೊಪ್ಪಲು– ಚಿಕ್ಕಾಡೆ ಗ್ರಾಮಗಳ ನಡುವೆ ಹರಿಯುವ ಚಿಕ್ಕದೇವರಾಯಸಾಗರ (ಸಿಡಿಎಸ್) ನಾಲೆಯಲ್ಲಿ ಗುರುವಾರ ಏಳೆಂಟು ನೀರುನಾಯಿ (ಆಟರ್) ಗಳು ಗೋಚರಿಸಿವೆ.
ನಾಲೆಯಲ್ಲಿ ಒಂದು ಗಂಟೆಗೂ ಹೆಚ್ಚು ಹೊತ್ತು ಅವು ನೀರಾಟ ಆಡಿವೆ. ನೀರಿನಿಂದ ದಡಕ್ಕೆ ಹತ್ತುವುದು ಮತ್ತೆ ನೀರಿಗೆ ಇಳಿಯುತ್ತಾ ನೋಡುಗರಿಗೆ ರಂಜನೆ ನೀಡಿವೆ. ನೀರುನಾಯಿಗಳ ಈ ಚಿನ್ನಾಟವನ್ನು ಅಕ್ಕಪಕ್ಕದ ಜಮೀನುಗಳ ರೈತರು ಕುತೂಹಲದಿಂದ ವೀಕ್ಷಿಸಿದ್ದಾರೆ.
‘ನದಿಗಳಲ್ಲಿ ನೀರುನಾಯಿಗಳು ಗೋಚರಿಸುವುದು ಸಾಮಾನ್ಯ. ಆದರೆ ಸಿಡಿಎಸ್ ನಾಲೆಯಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿವೆ.
ಈ ನಾಲೆ ಆರಂಭವಾಗುವ ಕೋಳ್ಬಾಯಿ ಕಟ್ಟೆ ಬಳಿ ಕಾವೇರಿ ನದಿಯಿಂದ ನಾಲೆಗೆ ಬಂದಿರುವ ಸಾಧ್ಗತೆ ಇದೆ. ಎಂಟರಿಂದ ಹತ್ತು ನೀರು ನಾಯಿಗಳ ಗುಂಪು ನಾಲೆಗೆ ಬಂದಿದೆ. ಅಳಿವಿನ ಅಂಚಿನಲ್ಲಿರುವ ನೀರುನಾಯಿಗಳನ್ನು ಕಂಡು ಖುಷಿಯಾಗಿದೆ’ ಎಂದು ಸಬ್ಬನಕುಪ್ಪೆ ಗ್ರಾಮದ ರೈತ ಮಂಜುನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.