ADVERTISEMENT

ಹಲಗೂರು: ಕರೀಂ ಮುಲ್ಲಾ ಶಾಖಾದ್ರಿ ದರ್ಗಾದಲ್ಲಿ ಗಂಧದ ಹಬ್ಬದ ಸಡಗರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 3:04 IST
Last Updated 20 ಜುಲೈ 2025, 3:04 IST
ಹಲಗೂರು ಸಮೀಪದ ಅಂತರವಳ್ಳಿ ಗ್ರಾಮದಲ್ಲಿರುವ ಕರೀಂ ಮುಲ್ಲಾ ಶಾಖಾದ್ರಿ ದರ್ಗಾದಲ್ಲಿ ಗಂಧದ ಹಬ್ಬದ ಅಂಗವಾಗಿ ಭಕ್ತರು ಪೂಜೆ ಸಲ್ಲಿಸಿದರು 
ಹಲಗೂರು ಸಮೀಪದ ಅಂತರವಳ್ಳಿ ಗ್ರಾಮದಲ್ಲಿರುವ ಕರೀಂ ಮುಲ್ಲಾ ಶಾಖಾದ್ರಿ ದರ್ಗಾದಲ್ಲಿ ಗಂಧದ ಹಬ್ಬದ ಅಂಗವಾಗಿ ಭಕ್ತರು ಪೂಜೆ ಸಲ್ಲಿಸಿದರು    

ಹಲಗೂರು: ಸಮೀಪದ ಅಂತರವಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ಅಲ್ ಹಜರತ್ ಕರೀಂ ಮುಲ್ಲಾ ಶಾಖಾದ್ರಿ ದರ್ಗಾದಲ್ಲಿ ಗುರುವಾರ ರಾತ್ರಿ ಉರುಸ್‌ (ಗಂಧದ ಹಬ್ಬ) ಹಿಂದೂ-ಮುಸ್ಲಿಂ ಭಾವೈಕ್ಯದೊಂದಿಗೆ ಸಂಭ್ರಮದಿಂದ ನೆರವೇರಿತು.

ನೂರಾರು ಮುಸ್ಲಿಮರು ಹುಲ್ಲಹಳ್ಳಿ ಗ್ರಾಮದಿಂದ ತೆರೆದ ವಾಹನದಲ್ಲಿ ತಂದ ಗಂಧವನ್ನು ಅಂತರವಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೀಂ ಉಲ್ಲಾ ಮಸೀದಿಗೆ ತರಲಾಯಿತು.

ಗ್ರಾಮದ ಹೃದಯ ಭಾಗದಲ್ಲಿರುವ ವೀರಭದ್ರೇಶ್ವರ ಸ್ವಾಮಿ, ಉಪ್ಪರಿಗೆ ಬಸವೇಶ್ವರ ದೇವಾಲಯ ಮತ್ತು ಬಿಸಿಲಮ್ಮ ದೇವಾಸ್ಥನದ ನಡುವೆ ಕರಿಂ ಉಲ್ಲಾ ಶಾಖಾದ್ರಿ ಮಸೀದಿ ಇದ್ದು, ಹಿಂದೂ ದೇವಾಲಯಗಳಿಗೂ ದೀಪಾಲಂಕಾರ ಮಾಡಿ ಸಡಗರದಿಂದ ಗಂಧದ ಹಬ್ಬ ಆಚರಿಸಲಾಯಿತು.

ADVERTISEMENT

ಗ್ರಾಮದ ಬಹುತೇಕ ಹಿಂದೂ ಧರ್ಮಿಯರು ಗಂಧದ ಹಬ್ಬದಂದು ಮಸೀದಿಗೆ ಆಗಮಿಸಿ ಕಲ್ಲು ಸಕ್ಕರೆ, ಉರಿಗಡಲೆ ಮತ್ತು ಕಡ್ಲೆ ಪುರಿಯನ್ನು ಮಸೀದಿಗೆ ಅರ್ಪಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ರಾಮನಗರ ಮೂಲದ ಮುಸ್ಲಿಂ ಗುರುಗಳು ದೇವರ ಕವಾಲಿಗಳನ್ನು ಹಾಡಿ ಭಕ್ತಿ ಮೆರೆದರು. ಗ್ರಾಮದ ನೂರಾರು ಭಕ್ತಾಧಿಗಳಿಗೆ ಮಸೀದಿ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.

ಹಲಗೂರು, ಧನಗೂರು, ನಿಟ್ಟೂರು, ಹುಲ್ಲಹಳ್ಳಿ, ಹುಸ್ಕೂರು ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಭಕ್ತರು ಗಂಧದ ಹಬ್ಬದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.