ADVERTISEMENT

ಮದ್ದೂರು: ದಲಿತ ಸಾಹಿತ್ಯ ಪರಿಷತ್‌ಗೆ ಶಿವಕುಮಾರ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 12:27 IST
Last Updated 17 ಜೂನ್ 2025, 12:27 IST
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮದ್ದೂರು ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು 
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮದ್ದೂರು ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು    

ಮದ್ದೂರು: ದಲಿತ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕೆ.ಟಿ.ಶಿವಕುಮಾರ್ ಆಯ್ಕೆಯಾದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪ್ರಾಂಶುಪಾಲ ಹನುಮಂತರಾಯಪ್ಪ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಪದಾಧಿಕಾರಿಗಳು: ಸುಶೀಲಮ್ಮ ಮಹದೇವಯ್ಯ (ಗೌರವಾಧ್ಯಕ್ಷೆ), ಬಸವರಾಜು ಕಾರ್ಕಳ್ಳಿ, ಸರೋಜಮ್ಮ ಲಿಂಗರಾಜು (ಉಪಾಧ್ಯಕ್ಷರು), ಮಲ್ಲಿಕೇಶ್ (ಪ್ರಧಾನ ಕಾರ್ಯದರ್ಶಿ), ಚಾಮನಹಳ್ಳಿ ರಾಚಯ್ಯ (ಸಹ ಕಾರ್ಯದರ್ಶಿ), ಗುರುಲಿಂಗಯ್ಯ (ಖಜಾಂಚಿ), ತೂಬಿನಕೆರೆ ಗೋವಿಂದು (ಸಾಂಸ್ಕೃತಿಕ ಕಾರ್ಯದರ್ಶಿ), ಅಂಬರಹಳ್ಳಿ ಸ್ವಾಮಿ (ಪತ್ರಿಕಾ ಕಾರ್ಯದರ್ಶಿ), ದೇವರಾಜು ಕೊಪ್ಪ (ಕಾನೂನು ಸಲಹೆಗಾರ), ಬಿ.ವಿ.ಹಳ್ಳಿ ನಾರಾಯಣ್, ಶೋಭಾ ಶಿವಣ್ಣ ಪ್ರಸನ್ನ ನೀಲಕಂಠನ ಹಳ್ಳಿ, ಪ್ರಮೀಳಾ ವೆಂಕಟೇಶ್, ಚಂದ್ರು ಬೆಸಗರಹಳ್ಳಿ, ಕೆ.ಜೆ.ಗೋವಿಂದರಾಜ್, ಪುಟ್ಟಲಿಂಗಯ್ಯ ಬೂದಗುಪ್ಪ, ಚಂದ್ರಶೇಖರ ಮದ್ದೂರು, ಮಲ್ಲೇಶ್ ಬೆಕ್ಕಹಳೆ, ಬೈರೇಶ್ ಹೊಸಗಾವಿ, ಚಂದ್ರು ಮದ್ದೂರು(ನಿರ್ದೇಶಕರು)

ADVERTISEMENT

‘ರಾಜ್ಯದಲ್ಲಿ ದಲಿತ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದಿದ್ದು, ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ದಲಿತ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬರುತ್ತಿದೆ ಎಂದು ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಹುರಗಲವಾಡಿ ರಾಮಯ್ಯ ತಿಳಿಸಿದರು.

‘ಜೂನ್ 28 ಮತ್ತು 29ರಂದು ರಾಯಚೂರಿನಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಯಲಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ಸಾಹಿತ್ಯ ಆಸಕ್ತರು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.