ADVERTISEMENT

ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಾಳೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 5:23 IST
Last Updated 30 ಜನವರಿ 2026, 5:23 IST
   

ಪ್ರಜಾವಾಣಿ ವಾ‌ರ್ತೆ

ಪಾಂಡವಪುರ: ಪಟ್ಟಣದ ಹೇಮಾವತಿ ಬಡಾವಣೆ ಸಮೀಪದ ಬನ್ನಿಮಂಟಪ ವೃತ್ತದಲ್ಲಿ ಹಾರೋಹಳ್ಳಿ ಲಕ್ಷ್ಮೀದೇವಿ ಯುವಕರ ಬಳಗದ ವತಿಯಿಂದ ಜ.31ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ.

ತಾ‌ಲ್ಲೂಕಿನ ಕೆ.ಬೆಟ್ಟಹಳ್ಳಿ ಲಕ್ಷ್ಮೀದೇವಿ ಹಬ್ಬ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಪಂದ್ಯಾವಳಿ ಆಯೋಜಿಸಿದ್ದು, ವಾಲಿಬಾಲ್ ಪ್ರೇಮಿಗಳು, ಹಾರೋಹಳ್ಳಿ ಗ್ರಾಮಸ್ಥರು, ಯುವಕರು ಪಂದ್ಯಾವಳಿ ಯಶಸ್ವಿಗೆ ಸಹಕರಿಸಬೇಕು ಎಂದು ಆಯೋಜಕ ಎಚ್.ಸಿ.ಕೃಷ್ಣೇಗೌಡ (ಪಟೇಲ್) ಮನವಿ ಮಾಡಿದ್ದಾರೆ.

ADVERTISEMENT

ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೂ ₹999 ಪ್ರವೇಶ ಶುಲ್ಕ ನಿಗದಿಪಡಿಸಿದ್ದು, ಪ್ರಥಮ ಬಹುಮಾನ ₹30 ಸಾವಿರ, ದ್ವಿತೀಯ ಬಹುಮಾನ ₹ 20ಸಾವಿರ, ತೃತೀಯ ಬಹುಮಾನ ₹10ಸಾವಿರ ಹಾಗೂ ಚತುರ್ಥ ಸ್ಥಾನಕ್ಕೆ ₹7ಸಾವಿರ ನಗದು ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ತಂಡದ ಹೆಸರು ನೋಂದಾಯಿಸಿಕೊಳ್ಳಲು ವರುಣ್‌ –76767 90717, ಕಾರ್ತಿಕ್–98865 40630, ರವಿ–70267 35697, ಮೇಘರಾಜು (ಅಪ್ಪು) –99642 28990 ಅವರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.