ಪ್ರಜಾವಾಣಿ ವಾರ್ತೆ
ನಾಗಮಂಗಲ: ‘ವಿದ್ಯಾರ್ಥಿಗಳು ಓದುವ ಮತ್ತು ಬರೆಯುವ ಜ್ಞಾನ ಬೆಳೆಸಿಕೊಳ್ಳುವ ಜೊತೆಗೆ ಬದುಕಿಗೆ ಅಗತ್ಯವಾದ ಮಾನವೀಯ ಮೌಲ್ಯ ಮತ್ತು ಗುಣಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು’ ಎಂದು ನಲ್ಕುಂದಿ ಶಾಲೆಯ ಮುಖ್ಯಶಿಕ್ಷಕ ಜೈಸ್ವಾಮಿ ಹೇಳಿದರು.
ತಾಲ್ಲೂಕಿನ ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ‘ನಮ್ಮ ವಿದ್ಯಾರ್ಥಿ ನಮ್ಮ ಮಾತು’ ಎಂಬ ವಿಶೇಷ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾರ್ಥಿಗಳು ಶಿಕ್ಷಣಕ್ಕೆ ಅಗತ್ಯವಾದಷ್ಟು ಮಾತ್ರವೇ ಸಮೂಹ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡರೆ ಉತ್ತಮ. ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದುವ ಜೊತೆಗೆ ಗುರುಭಕ್ತಿ, ಶ್ರದ್ಧೆ, ಆಸಕ್ತಿ, ಸ್ವಯಂ ಶಿಸ್ತಿನ ಗುಣಗಳನ್ನು ಮೈಗೂಡಿಸಿಕೊಂಡು ಸಾಧನೆಯ ಮಾರ್ಗದಲ್ಲಿ ಸಾಗಬೇಕು’ ಎಂದು ಹೇಳಿದರು.
ದೊಂದೇಮಾದಹಳ್ಳಿ ಶಾಲೆ ಮುಖ್ಯಶಿಕ್ಷಕ ಸುನೀಲ್ ಮಾತನಾಡಿದರು.
ನಂತರ ನಲ್ಕುಂದಿ, ತೊರೆಮಲ್ಲನಾಯಕನಹಳ್ಳಿ, ದೊಡ್ಡಚಿಕ್ಕನಹಳ್ಳಿ, ದೊಡ್ಡಜಕ್ಕನಹಳ್ಳಿ, ದೊಂದೇಮಾದಹಳ್ಳಿ ಶಾಲೆ ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಆರ್‌ಪಿಗಳಾದ ಕೆಂಪೇಗೌಡ, ವೆಂಕಟೇಶ್, ಮುಖ್ಯಶಿಕ್ಷಕರಾದ ಸುನೀಲ್, ಗುರುರಾಜ್, ಸನೀತಾ, ವರಾದೇವಿ, ಹರದನಹಳ್ಳಿಯ ಮುಖ್ಯ ಶಿಕ್ಷಕ ಚಿಕ್ಕಬೋರಯ್ಯ, ಸಾದಿಕ್ ಅಹಮ್ಮದ್, ಪರಶಿವಮೂರ್ತಿ, ರಾಜ್ ಕುಮಾರ್, ಟಿ.ಎಂ.ಶ್ರುತಿ, ಸಚಿನ್, ಎಸ್‌ಡಿಎಂಸಿ ಅಧ್ಯಕ್ಷ ಡಿ.ಕೆ.ನರಸಿಂಹಮೂರ್ತಿ ಮತ್ತು ಸದಸ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.