ಮಂಡ್ಯ: ಭಾರತೀಯ ಸೈನಿಕರೊಂದಿಗೆ ನಾಗರಿಕರಿದ್ದೇವೆ ಎಂಬ ಘೋಷಣೆಯೊಂದಿಗೆ ಜಿಲ್ಲಾ ಮಾಜಿ ಸೈನಿಕರ ಸಂಘ, ವಿದ್ಯಾರ್ಥಿಗಳು, ಬಿಜೆಪಿ ಹಾಗೂ ಹಿಂದುತ್ವಪರ ಸಂಘಟನೆಗಳು ಶನಿವಾರ ತಿರಂಗ ಯಾತ್ರೆ ನಡೆಸಿ, ಆಪರೇಷನ್ ಸಿಂಧೂರಕ್ಕೆ ಬೆಂಬಲ ನೀಡಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜಮಾವಣೆಗೊಂಡ ಎಲ್ಲ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಸರ್‌ಎಂ.ವಿ. ಪ್ರತಿಮೆವರೆಗೆ ತಿರಂಗ ಯಾತ್ರೆ ನಡೆಸಿ ನಂತರ ಸಭೆ ನಡೆಸಿದರು.
ಬಾಳೇಹೊನ್ನೂರು ರಂಭಾಪುರಿ ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಹಲ್ಗಾಮ್‌ನಲ್ಲಿ ಹಿಂದೂಗಳನ್ನು ಉಗ್ರರು ಹತ್ಯೆ ಮಾಡಿರುವುದನ್ನು ಖಂಡಿಸುತ್ತೇವೆ. ನಮ್ಮ ಭಾರತೀಯ ಮೂರು ಸೇನಾ ಪಡೆಗಳು ಹೋರಾಟ ನಡೆಸಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದಾರೆ. ಇದು ದೇಶಕ್ಕೆ ನೀಡಿದ ಕೊಡುಗೆ ಎಂದು ಶ್ಲಾಘಿಸಿದರು.
ಬೇಬಿ ಬೆಟ್ಟದ ಶಿವಬಸವ ಸ್ವಾಮೀಜಿ, ಜಿಲ್ಲಾ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲರಾಜು, ಮಾಜಿ ಸೈನಿಕರಾದ ಬಿ.ಟಿ. ರಮೇಶ್, ರಾಜಣ್ಣ, ರಮೇಶ್, ಸತೀಶ್, ಮುಖಂಡರಾದ ಇಂದ್ರೇಶ್, ಅಶೋಕ್ ಜಯರಾಂ, ಎಚ್.ಆರ್.ಅರವಿಂದ್, ಎಚ್.ಆರ್.ಅಶೋಕ್, ಕೆಂಪುಬೋರಯ್ಯ, ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ, ನಿತ್ಯಾನಂದ, ನಾಗಾನಂದ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.