ADVERTISEMENT

ರೈತ ವಿರೋಧಿ ಕೇಂದ್ರಕ್ಕೆ ತಕ್ಕ ಪಾಠ ಕಲಿಸಿ: ಮನವಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 5:42 IST
Last Updated 23 ಏಪ್ರಿಲ್ 2024, 5:42 IST
ಮೋಹನ್ ಕುಮಾರ್
ಮೋಹನ್ ಕುಮಾರ್   

ಮದ್ದೂರು: ‘ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದ್ದ ರೈತ ವಿರೋಧಿ ಹಾಗೂ ರೈತ ಮುಕ್ತ ಭಾರತ ಮಾಡಲು ಮುಂದಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸಬೇಕು’ ಎಂದು ಮಂಡ್ಯ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಆರ್ ಮೋಹನ್ ಕುಮಾರ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ದೆಹಲಿಯ ಗಡಿಯಲ್ಲಿ ಚಳಿ, ಮಳೆ ಎನ್ನದೆ ಒಂದೂವರೆ ವರ್ಷ ಚಳವಳಿ ಮಾಡಿದ ಅವಧಿಯಲ್ಲಿ ಸುಮಾರು 750 ರೈತರು ಪ್ರಾಣ ಕಳೆದುಕೊಂಡಿದ್ದು ಇದಕ್ಕೆ ಪ್ರಮುಖ ಕಾರಣ ಮೋದಿ ನೇತೃತ್ವದ ಕೇಂದ್ರ ಸರ್ಕಾರ’ ಎಂದು ಆರೋಪಿಸಿದ್ದಾರೆ

‘ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡದ, ರೈತರ ಬೆಳೆಗಳಿಗೆ ಕನಿಷ್ಠ ಬೆಲೆ ನಿಗದಿ ಮಾಡದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಮತದಾರರು ಬಿಸಿ ಮುಟ್ಟಿಸಬೇಕು’ ಎಂದಿದ್ದಾರೆ.

ADVERTISEMENT

‘10 ವರ್ಷದಿಂದ ಕಬ್ಬಿನ ಬೆಲೆ ಹೆಚ್ಚಿಸಿರುವುದು ಟನ್‌ವೊಂದಕ್ಕೆ ಕೇವಲ ₹ 72 ಮಾತ್ರ. ಅದು ಶೇ 9.5 ಸಕ್ಕರೆ ಇಳುವರಿ ಆಧಾರದ ಮೇಲೆ ನಿಗದಿಯ ಆಗುತ್ತಿದ್ದು, ಈಗ ಶೇ 10.25  ಇಳುವರಿ ಮಾಡಿಸಿ ಕಬ್ಬಿನ ದರ ನಿಗದಿ ಮಾಡಲು ಆದೇಶಿಸಿ ಕಬ್ಬು ಬೆಳೆಗಾರರನ್ನು ನಷ್ಟಕ್ಕೆ ಸಿಲುಕಿಸಿದೆ. ಕಬ್ಬಿಗೆ ಹಾಗೂ ಯಾವುದೇ ಬೆಳೆಗಳಿಗೆ ವೈಜ್ಞಾನಿಕವಾಗಿ ಮತ್ತು ಲಾಭದಾಯಕ ಬೆಲೆ ನೀಡಲು ಬಿಜೆಪಿ ಸರ್ಕಾರ ಮುಂದಾಗಿಲ್ಲ’ ಎಂದು ಆರೋಪಿಸಿದರು.

ಎನ್‌ಡಿಎ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ರೈತರ ಉಳಿವಿಗೆ ಸಹಕರಿಸಬೇಕು ಇಲ್ಲವಾದಲ್ಲಿ ಮುಂದೆ ಕರಾಳ ದಿನಗಳನ್ನ ಎದುರು ನೋಡಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

Graphic text / Statistics - ಮದ್ದೂರು: ‘ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದ್ದ ರೈತ ವಿರೋಧಿ ಹಾಗೂ ರೈತ ಮುಕ್ತ ಭಾರತ ಮಾಡಲು ಮುಂದಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸಬೇಕು’ ಎಂದು ಮಂಡ್ಯ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಆರ್ ಮೋಹನ್ ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ದೆಹಲಿಯ ಗಡಿಯಲ್ಲಿ ಚಳಿ ಮಳೆ ಎನ್ನದೆ ಒಂದೂವರೆ ವರ್ಷ ಚಳವಳಿ ಮಾಡಿದ ಅವಧಿಯಲ್ಲಿ ಸುಮಾರು 750 ರೈತರು ಪ್ರಾಣ ಕಳೆದುಕೊಂಡಿದ್ದು ಇದಕ್ಕೆ ಪ್ರಮುಖ ಕಾರಣ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂದು ಆರೋಪಿಸಿದ್ದಾರೆ ‘ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡದ ರೈತರ ಬೆಳೆಗಳಿಗೆ ಕನಿಷ್ಠ ಬೆಲೆ ನಿಗದಿ ಮಾಡದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಮತದಾರರು ಬಿಸಿ ಮುಟ್ಟಿಸಬೇಕು’ ಎಂದಿದ್ದಾರೆ. ‘10 ವರ್ಷದಿಂದ ಕಬ್ಬಿನ ಬೆಲೆ ಹೆಚ್ಚಿಸಿರುವುದು ಟನ್‌ವೊಂದಕ್ಕೆ ಕೇವಲ ₹ 72 ಮಾತ್ರ. ಅದು ಶೇ 9.5 ಸಕ್ಕರೆ ಇಳುವರಿ ಆಧಾರದ ಮೇಲೆ ನಿಗದಿಯ ಆಗುತ್ತಿದ್ದು ಈಗ ಶೇ 10.25 ಇಳುವರಿ ಮಾಡಿಸಿ ಕಬ್ಬಿನ ದರ ನಿಗದಿ ಮಾಡಲು ಆದೇಶಿಸಿ ಕಬ್ಬು ಬೆಳೆಗಾರರನ್ನು ನಷ್ಟಕ್ಕೆ ಸಿಲುಕಿಸಿದೆ. ಕಬ್ಬಿಗೆ ಹಾಗೂ ಯಾವುದೇ ಬೆಳೆಗಳಿಗೆ ವೈಜ್ಞಾನಿಕವಾಗಿ ಮತ್ತು ಲಾಭದಾಯಕ ಬೆಲೆ ನೀಡಲು ಬಿಜೆಪಿ ಸರ್ಕಾರ ಮುಂದಾಗಿಲ್ಲ’ ಎಂದು ಆರೋಪಿಸಿದರು. ರೈತ ವಿರೋಧಿ ನರೇಂದ್ರ ಮೋದಿ ಸರ್ಕಾರವನ್ನ ಮನೆಗೆ ಕಳುಹಿಸದಿದ್ದಲ್ಲಿ ರೈತರಿಗೆ ಉಳಿಗಾಲವಿಲ್ಲ ಎಂದಿರುವ ಅವರು2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ರೈತರ ಉಳಿವಿಗೆ ಸಹಕರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರಾಳ ದಿನಗಳನ್ನ ಎದುರು ನೋಡಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.