
ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ಹುಂಡಿ ಎಣಿಕೆಯು ಶುಕ್ರವಾರ ನಡೆಯಿತು.
ಮುಜರಾಯಿ ಅಧಿಕಾರಿ ತಹಶೀಲ್ದಾರ್ ಅಶೋಕ್ ಮಾರ್ಗದರ್ಶನದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ಎರಡು ದೇಗುಲಗಳ ಒಟ್ಟು 22ಹುಂಡಿಗಳಿಂದ ₹25,05,085 ಕಾಣಿಕೆ ಹಣ ಹಾಗೂ 250 ಗ್ರಾಂ. ತೂಕದ ಬೆಳ್ಳಿ ತೊಟ್ಟಿಲು, ಹಾವಿನ ಹೆಡೆಯಂತಹ ಬೆಳ್ಳಿ ಸಾಮಾಗ್ರಿಗಳು ದೊರತಿವೆ.
ಕಾಣಿಕೆ ಹಣವನ್ನು ಕೆ.ಆರ್.ಪೇಟೆ ಬ್ಯಾಂಕ್ ಆಫ್ ಬರೋಡಾದ ದೇಗುಲದ ಮುಜರಾಯಿ ಖಾತೆಗೆ ಜಮೆ ಮಾಡಲಾಯಿತು.
ಉಪತಹಶೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ಡಿ.ಆರ್.ನರೇಂದ್ರ, ಗ್ರಾಮ ಆಡಳಿತಾಧಿಕಾರಿ ಬಿ.ಎಂ.ಪ್ರಸನ್ನ, ತಿಪ್ಪೇಶ್, ರಘುರಾಜಶೆಟ್ಟಿ, ಸುನೀಲ್‌ಗಾಣಿಗೇರ್, ಹರ್ಷಿತಾ, ವನಜಾಕ್ಷಿ, ಗ್ರಾಮ ಸಹಾಯಕಿ ಶೀಲಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.