
ಪ್ರಜಾವಾಣಿ ವಾರ್ತೆ
ಸಂತೇಬಾಚಹಳ್ಳಿ: ಇಲ್ಲಿನ ಸಾರಂಗಿ ಗ್ರಾಮದ ಕೋಡಿಯಮ್ಮ ದೇವಾಲಯಕ್ಕೆ ರಾತ್ರಿ ವೇಳೆ ನುಗ್ಗಿರುವ ಕಳ್ಳರು ಬೀಗ ಮುರಿದು ಹುಂಡಿತಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ದೇವರ ಮೂರ್ತಿಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕದ್ದು ಈಚೆಗೆ ಪರಾರಿಯಾಗಿದ್ದಾರೆ.
ಗ್ರಾಮದ ಮುಖಂಡ ಈಶ ಮಾತನಾಡಿ, ‘ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಬೇಕು. ಅಕ್ಕಪಕ್ಕದ ಗ್ರಾಮಸ್ಥರು ದೇವಾಲಯದಲ್ಲಿ ತಾಳಿ ಸೇರಿ ಹಣವನ್ನು ದೇವಾಲಯದಲ್ಲಿ ಇಡಬಾರದು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ರಮೇಶ್, ಗಿರೀಶ್, ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಗ್ರಾಮಸ್ಥರು ಇದ್ದರು.