
ಮದ್ದೂರು: ದೇವಸ್ಥಾನಗಳು ನಮ್ಮ ಪೂಜನೀಯ ಧಾರ್ಮಿಕ ಭಕ್ತಿ ಕೇಂದ್ರಗಳು ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾಪನಾ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಮಾದನಾಯಕನಹಳ್ಳಿಯಲ್ಲಿ ನೂತನವಾಗಿ ಜೀಣೋದ್ಧಾರಗೊಳಿಸಿ ನಿರ್ಮಿಸಲಾಗಿರುವ ಸಿದ್ದರಾಮೇಶ್ವರಸ್ವಾಮಿ ದೇವಸ್ಥಾನದ ರಾಜಗೋಪುರ ಹಾಗೂ ಮಹಾಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು.
‘ದೇವಸ್ಥಾನಗಳಲ್ಲಿ ಪ್ರಾರ್ಥನೆಯು ಬಹುಬೇಗ ಫಲಿಸುತ್ತವೆ ಹಾಗೂ ನೆಮ್ಮದಿ ತಾಣವಾಗಿರುತ್ತದೆ. ಯಾವುದೇ ಒಂದು ದೇವಸ್ಥಾನ ಪ್ರತಿಷ್ಠಾಪನೆ ಆಗಬೇಕಾದರೆ ಅಲ್ಲಿ ಸಾತ್ವಿಕ ಶಕ್ತಿಯ ವೃದ್ಧಿಗಾಗಿ ನಿರಂತರವಾಗಿ ಲೋಕೋದ್ಧಾರ ಯಾಗಗಳು ನಡೆದಿರುತ್ತದೆ’ ಎಂದರು.
ಶಾಸಕ ಕೆ. ಎಂ ಉದಯ್ ಮಾತನಾಡಿ, ‘ಮುಂದಿನ ದಿನಗಳಲ್ಲಿ ದೇಗುಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದು ಪುಣ್ಯ ಕ್ಷೇತ್ರವಾಗಲಿದೆ’ ಎಂದರು.
ಪಟ್ಟಲದಮ್ಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ರಾಜಣ್ಣ ಮಾತನಾಡಿ, ‘ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಭೋಜನ ಪ್ರಸಾದ ಸ್ವೀಕರಿಸಿದರು ಎಂದರು.
ಶಿವಾರ ಉಮೇಶ್ ತಂಡ ಗೀತಗಾಯನ ನಡೆಸಿಕೊಟ್ಟರು. ದೇಗುಲದ ಪ್ರದಾನ ಅರ್ಚಕ ಸೂರ್ಯನಾರಾಯಣ ದೀಕ್ಷಿತ್ ಅವರು ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಅನ್ನದಾನಿ, ಮನ್ಮುಲ್ ನಿರ್ದೇಶಕ ಹರೀಶಬಾಬು,ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಟ್ರಸ್ಟ್ ನಅಧ್ಯಕ್ಷ ಕೆ.ರಾಜಣ್ಣ, ಕಾರ್ಯದರ್ಶಿ ಪ್ರೊ.ಮಲ್ಲಯ್ಯ, ಸಹ ಕಾರ್ಯದರ್ಶಿ ಎಂ.ಮಹೇಶ್, ಖಜಾಂಚಿ ಟಿ.ಆರ್.ಗಿರೀಶ, ಸದಸ್ಯರಾದ ತೈಲೂರು ಸಿದ್ದರಾಜು, ಟಿ.ರಾಜೇಂದ್ರಕುಮಾರ್, ನಿಡಘಟ್ಟ ಪ್ರಕಾಶ್, ಬಿ.ಕೊದಂಡರಾಮ, ಸ್ವಾಮಿ, ಎಂ.ಬಿ.ಶಿವಲಿಂಗಯ್ಯ, ಎ.ನಾರಾಯಣಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.