ADVERTISEMENT

ಕನ್ನಡ ನಾಡಿಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ: ಧರ್ಮೇಂದ್ರಕುಮಾರ್ ಅರೇನಹಳ್ಳಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 4:25 IST
Last Updated 9 ನವೆಂಬರ್ 2025, 4:25 IST
ಮಂಡ್ಯ ನಗರದ ಮಿಮ್ಸ್‌ ಸಭಾಂಗಣದಲ್ಲಿ ಕಲರವ-2025 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದ್ಯರು ಮತ್ತು ಶುಶ್ರೂಷಕರು
ಮಂಡ್ಯ ನಗರದ ಮಿಮ್ಸ್‌ ಸಭಾಂಗಣದಲ್ಲಿ ಕಲರವ-2025 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದ್ಯರು ಮತ್ತು ಶುಶ್ರೂಷಕರು   

ಮಂಡ್ಯ: ‘ಕನ್ನಡ ನಾಡಿಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ’ ಎಂದು ಇತಿಹಾಸ ತಜ್ಞ ಧರ್ಮೇಂದ್ರಕುಮಾರ್ ಅರೇನಹಳ್ಳಿ ಹೇಳಿದರು.

ನಗರದ ಮಿಮ್ಸ್‌ ಸಭಾಂಗಣದಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕನ್ನಡ ಕಾರ್ಯಕಾರಿ ಸಮಿತಿ) ವತಿಯಿಂದ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶನಿವಾರ ನಡೆದ ಕಲರವ-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ನಾಡಿನ ಇತಿಹಾಸ, ರಾಜ ಮಹಾರಾಜರ ಕೊಡುಗೆ ಅನನ್ಯ. ಕಲೆ-ಸಾಹಿತ್ಯ ಜನಸಾಮಾನ್ಯರ ಜೀವನಕ್ಕಾಗಿ ಉತ್ತಮ ಆಡಳಿತದೊಂದಿಗೆ ಕೋಟೆ ಕಟ್ಟಿ ಸಾಮ್ರಾಜ್ಯ ನಡೆಸಿದ ಕೀರ್ತಿ ನಮ್ಮ ಕರುನಾಡಿಗಿದೆ. ಇದರ ಜೊತೆಗೆ ಕನ್ನಡ ಭಾಷೆಯ ಸೊಗಡು ವೈವಿಧ್ಯತೆಯಲ್ಲಿ ಏಕತೆ ಸಾರುತ್ತವೆ ಎಂದರು.

ADVERTISEMENT

ಅಂದಿನ ಬೆಂದಕಾಳೂರಿಗೆ ನಾಡಪ್ರಭು ಕೆಂಪೇಗೌಡ ಹಾಕಿಕೊಟ್ಟ ಅಡಿಪಾಯವು ಪ್ರಸ್ತುತದಲ್ಲಿ ಅಜರಾಮರವಾಗಿ ಅಭಿವೃದ್ಧಿ ಹೊಂದುತ್ತಿದೆ. ಯಾವುದೇ ಜಾತಿ ಧರ್ಮ ಎನ್ನದೇ ವ್ಯಾಪಾರ ನಡೆಸಲು, ಕೃಷಿ ಮಾಡಲು ಕೆರೆಗಳ ನಿರ್ಮಾಣ ಸೇರಿಸಿದಂತೆ ಕೆಂಪೇಗೌಡರ ದೂರದೃಷ್ಟಿ ಇಂದಿನ ರಾಜಕಾರಣಿಗಳಿಗೆ ದಾರಿದೀಪ ಎಂದರೆ ಅತಿಶಯೋಕ್ತಿಯಲ್ಲ ಎಂದು ಶ್ಲಾಘಿಸಿದರು.

ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಜಿ.ಶಿವಕುಮಾರ್, ಸ್ಥಾನೀಯ ವೈದ್ಯಾಧಿಕಾರಿ ಡಾ.ಡಿ.ಬಿ.ದರ್ಶನ್‌ ಕುಮಾರ್, ಶುಶ್ರೂಷಕ ಪ್ರಾಂಶುಪಾಲ ಎಲ್.ಎಲ್.ಕ್ಲೆಮೆಂಟ್, ಪ್ರಭಾರ ಶಶ್ರೂಷಕ ಅಧೀಕ್ಷಕಿ ಸಿ.ಎಂ.ರೇಣು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.