ADVERTISEMENT

ನಾಗಮಂಗಲ: ಟಿಪ್ಪರ್‌ ಚಾಲಕನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 4:24 IST
Last Updated 30 ಡಿಸೆಂಬರ್ 2025, 4:24 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ನಾಗಮಂಗಲ: ಕಲ್ಲು ಗಣಿಗಾರಿಕೆ ಕ್ವಾರಿಯ ನೀರಿಗೆ ಶುಕ್ರವಾರ ಮುಂಜಾನೆ ಬಿದ್ದಿದ್ದ ಟಿಪ್ಪರ್ ಲಾರಿ ಚಾಲಕನ ಶವವು ಮೂರು ದಿನದ ನಂತರ ಸೋಮವಾರ ರಾತ್ರಿ ಪತ್ತೆಯಾಗಿದೆ. 

ತಾಲ್ಲೂಕಿನ ದುಮ್ಮಸಂದ್ರ ಗ್ರಾಮದ ಲಕ್ಷ್ಮಣ ಅಲಿಯಾಸ್ ಲಚ್ಚಿ (45) ಎಂಬಾತನೇ ಮೃತಪಟ್ಟ ಟಿಪ್ಪರ್ ಚಾಲಕ.

ADVERTISEMENT

ತಾಲ್ಲೂಕಿನ ವಡೇರಪುರ ಸಮೀಪದ ದೊಡ್ಡಜಟಕಾ ರಸ್ತೆಯಲ್ಲಿರುವ ಬಸವೇಶ್ವರ ಸ್ಟೋನ್ ಕ್ರಷರ್‌ನಲ್ಲಿ ಶುಕ್ರವಾರ ನಸುಕಿನ ವೇಳೆ ಘಟನೆ ಸಂಭವಿಸಿತ್ತು.

ವಡೇರಪುರ ಗ್ರಾಮದ ಕಾಂತರಾಜು ಎಂಬುವರಿಗೆ ಸೇರಿದ ಬಸವೇಶ್ವರ ಸ್ಟೋನ್ ಕ್ರಷರ್ ಮತ್ತು ಕಲ್ಲುಗಣಿಗಾರಿಕೆ ಕ್ವಾರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ (ಲಚ್ಚಿ) ಟಿಪ್ಪರ್ ಲಾರಿಯಲ್ಲಿ ಬೋರ್ಡ್ರಸ್ ಕಲ್ಲು ತುಂಬಿಕೊಂಡು ಕಿರಿದಾದ ಕಲ್ಲುಕ್ವಾರಿಯ ರಸ್ತೆಯಲ್ಲಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಟಿಪ್ಪರ್ ಪಕ್ಕದಲ್ಲಿನ ನೀರು ತುಂಬಿದ ಹಳ್ಳಕ್ಕೆ ಉರುಳಿಬಿದ್ದು ಈ ಅವಘಡ ಸಂಭವಿಸಿತ್ತು.

ಈಜು ತಜ್ಞ ಈಶ್ವರ್ ಮಲ್ಪೆ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತದೇಹಕ್ಕಾಗಿ ಶೋಧ ನಡೆಸಿದ್ದರು ಕೂಡ ಮೃತದೇಹ ಪತ್ತೆಯಾಗಿರಲಿಲ್ಲ. ಶನಿವಾರ ಟಿಪ್ಪರ್ ಲಾರಿಯನ್ನು ಪತ್ತೆಹಚ್ಚಿ ಮೆಲಕ್ಕೆತ್ತಲಾಗಿತ್ತು. ಸೋಮವಾರ ಮೃತದೇಹ ಪತ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.