ADVERTISEMENT

ಮಂಡ್ಯ | ಚಳಿಯ ಪರಿಣಾಮ: ಟೊಮೆಟೊ ದುಬಾರಿ, ಬೀನ್ಸ್‌ ದರ ನಿಯಂತ್ರಣ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2023, 14:27 IST
Last Updated 15 ನವೆಂಬರ್ 2023, 14:27 IST
ಮಂಡ್ಯದ ಪೇಟೆಬೀದಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟವಾಗುತ್ತಿರುವುದು
ಮಂಡ್ಯದ ಪೇಟೆಬೀದಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟವಾಗುತ್ತಿರುವುದು   

ಮಂಡ್ಯ: ಕಳೆದ ನಾಲ್ಕೈದು ದಿನಗಳಿಂದ ಹವಾಮಾನ ವೈಪರೀತ್ಯ ಉಂಟಾಗಿದ್ದು ಕೆಲವು ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಟೊಮೆಟೊ ಬೆಲೆ ಕೆ.ಜಿ 40ಕ್ಕೆ ಏರಿಕೆಯಾಗಿದ್ದು ಗ್ರಾಹಕರಿಗೆ ಹೊರೆ ಉಂಟಾಗಿದೆ.

ದೀಪಾವಳಿ ಸಮೀಪಿಸುತ್ತಿದ್ದಂತೆ ಕೊಂಚ ಚಳಿ ಆರಂಭವಾಗಿದ್ದು ಟೊಮೆಟೊ ಬೆಳೆ ಮೇಲೆ ಪರಿಣಾಮ ಬೀರಿದೆ. ರೈತರು ತೀವ್ರ ಬಿಸಿಲಿನ ಕಾರಣಕ್ಕೆ ಟೊಮೆಟೊ ಬೆಳೆಗೆ ಔಷಧಿ ಸಂಪಡಣೆ ಮಾಡಿದ್ದರು. ಆದರೆ ಈಗ ಚಳಿ ಆರಂಭವಾಗಿರುವ ಕಾರಣ ಟೊಮೆಟೊ ಹಣ್ಣುಗಳು ಗಿಡದಲ್ಲಿಯೇ ಕರಗಿ ಹೋಗುತ್ತಿವೆ. ಹೀಗಾಗಿ ಸ್ಥಳೀಯ ಹಣ್ಣು ಮಾರುಕಟ್ಟೆಗೆ ಬಾರದ ಕಾರಣ ಬೆಲೆ ಏರಿಕೆಯಾಗಿದೆ.

2 ತಿಂಗಳ ಹಿಂದಷ್ಟೇ ಟೊಮೆಟೊ ಬೆಲೆ ₹ 100ರ ಗಡಿ ದಾಟಿ ಇಳಿಕೆ ಕಂಡಿತ್ತು, ₹10– ₹20ಕ್ಕೆ ಟೊಮೆಟೊ ದೊರೆಯುತ್ತಿತ್ತು. ಆದರೆ ಈಗ ಮತ್ತೆ ಏರುಗತಿಯಲ್ಲಿ ಸಾಗುತ್ತಿದೆ. ದೀಪಾವಳಿ ದಿನ ಕೆ.ಜಿ ₹ 25ಕ್ಕೆ ದೊರೆಯುತ್ತಿತ್ತು. ಈಗ ಇನ್ನಷ್ಟು ಹೆಚ್ಚಳವಾಗಿದ್ದು ಉತ್ತಮ ಗುಣಮಟ್ಟದ ಟೊಮೆಟೊ ₹ 40ಕ್ಕೆ ಮಾರಾಟವಾಗುತ್ತಿದೆ.

ADVERTISEMENT

‘ನಾಲ್ಕು ದಿನಗಳ ಹಿಂದಷ್ಟೇ ಬೇಸಿಗೆಯಂತಹ ಬಿಸಿಲು ಇತ್ತು. ಈಗ ಏಕಾಏಕಿ ಚಳಿ ಆರಂಭವಾಗಿದ್ದು ಟೊಮೆಟೊ ಗಿಡಗಳು ಮುದುಡಿ ಹೋಗುತ್ತಿವೆ. ಹೀಗಾಗಿ ಹಣ್ಣು ಮಾರುಕಟ್ಟೆಗೆ ಬಾರದ ಕಾರಣ ಬೆಲೆ ಏರಿಕೆಯಾಗಿದೆ’ ಎಂದು ವ್ಯಾಪಾರಿ ತೌಫೀಕ್‌ ಹೇಳಿದರು.

ಟೊಮೆಟೊ ಬಿಟ್ಟರೆ ಇತರ ತರಕಾರಿ ಬೆಲೆ ನಿಯಂತ್ರಣಕ್ಕೆ ಬಂದಿದೆ. ಮುಖ್ಯವಾಗಿ ₹ 100 ಗಡಿ ತಲುಪಿದ್ದ ಬೀನ್ಸ್‌ ಬೆಲೆ ಈಗ ₹ 60ರಂತೆ ಮಾರಾಟವಾಗುತ್ತಿದೆ. ಸೌತೆಕಾಯಿ, ಎಲೆಕೋಸು ₹ 25ರಂತೆ ಕೆ.ಜಿ ದೊರೆಯುತ್ತಿದೆ. ಬೆಂಡೆಕಾಯಿ, ಸೋರೆಕಾಯಿ, ಪಡವಲಕಾಯಿ, ಆಲೂಗಡ್ಡೆ ₹30ರಂತೆ ಮಾರಾಟವಾಗುತ್ತಿವೆ.

ಭಜಿ ಮೆಣಸಿನಕಾಯಿ, ಕ್ಯಾರೆಟ್‌, ಸೀಮೆಬದನೆಕಾಯಿ, ಹಾಗಲಕಾಯಿ, ಹೂಕೋಸು, ಅವರೆಕಾಯಿ, ಈರೇಕಾಯಿ, ಮೂಲಂಗಿ, ತೊಂಡೆಕಾಯಿ, ಬೀಟ್‌ರೂಟ್‌, ಸಿಹಿಗೆಣಸು, ಮರಗಣೆಸು, ಮಂಗಳೂರುಸೌತೆ ₹40, ಸುವರ್ಣಗೆಡ್ಡೆ, ಈರುಳ್ಳಿ ₹50ರಂತೆ ಮಾರಾಟವಾಗುತ್ತಿವೆ.

ಹಸಿರು ಮೆಣಸಿನಕಾಯಿ, ತಗಣಿಕಾಯಿ ₹60, ಶುಂಠಿ 60, ಫಾರಂ ಬೀನ್ಸ್‌, ಗೆಡ್ಡೆಕೋಸು ₹80, ನುಗ್ಗೇಕಾಯಿ, ನಾಟಿ ಬೀನ್ಸ್‌, ದಪ್ಪಮೆಣಸಿನಕಾಯಿ ₹100, ಹಸಿಬಟಾಣಿ ₹120, ಫಾರಂಬೆಳ್ಳುಳ್ಳಿ ₹160, ನಾಟಿ ಬೆಳ್ಳುಳ್ಳಿ ₹180ರಂತೆ ಮಾರಾಟವಾಗುತ್ತಿವೆ. ಒಂದು ನಿಂಬೆಹಣ್ಣು ₹ 5 ರಿಂದ ₹ 10ರವರೆಗೂ ಮಾರಾಟವಾಗುತ್ತಿದೆ.

ಸೊಪ್ಪುಗಳ ಬೆಲೆ ನಿಯಂತ್ರಣದಲ್ಲಿದ್ದು ಕೀರೆ ₹ 10, ದಂಟು, ಪಾಲಾಕ್‌, ಕರಿಬೇವು ₹ 15, ಸಬ್ಬಸಿಗೆ, ಫಾರಂ ಕೊತ್ತಂಬರಿ, ಕಿಲ್‌ ಕೀರೆ ₹ 20, ಚಿಕ್ಕಿಸೊಪ್ಪು, ನಾಟಿ ಕೊತ್ತಂಬರಿ ₹25ಕ್ಕೆ ಒಂದು ಕಟ್ಟು ಮಾರಾಟವಾಗುತ್ತಿವೆ. ಮೆಂತೆ ಸೊಪ್ಪಿನ ಬೆಲೆ ಕೂಡ ಏರಿಕೆಯಾಗಿದ್ದು ₹40ರಂತೆ ಪ್ರತಿ ಕಟ್ಟಿಗೆ ಮಾರಾಟವಾಗುತ್ತಿವೆ.

ದೀಪಾವಳಿ ಅಂಗವಾಗಿ ಹೂವುಗಳಲ್ಲಿ ಮಲ್ಲಿಗೆ, ಕನಕಾಂಬರ, ಕಾಕಡ ಹೂ ದುಬಾರಿಯಾಗಿದೆ. ಕೆ.ಜಿ ಕೆಂಪು ಚೆಂಡುಹೂ ಮತ್ತು ಹಳದಿ ಚೆಂಡು ಹೂ ₹50, ಬಿಳಿ ಸೇವಂತಿಗೆ ₹230, ಸೇವಂತಿಗೆ, ಬಟನ್ಸ್‌ ₹250, ಸಣ್ಣಗುಲಾಬಿ ₹300, ಸುಗಂಧರಾಜ ₹400, ಗಣಗಲೆ, ಕಲ್ಕತ್ತಾ ಮಲ್ಲಿಗೆ ₹500, ಮರಳೆ ₹600, ಕಾಕಡ ₹800, ಮಲ್ಲಿಗೆ ₹1 ಸಾವಿರ, ಕನಕಾಂಬರ ₹1,200ದವರೆಗೂ ಮಾರಾಟವಾಗುತ್ತಿವೆ.

ಮಾರು ತುಳಸಿ ₹30– 40, ಹಳದಿ ಚೆಂಡುಹೂ ಮತ್ತು ಕೆಂಪು ಚೆಂಡು ಹೂ ₹60, ಕಾಕಡ, ಗಣಗಲೆ ₹80, ಸೇವಂತಿಗೆ ₹30– 50, ಬಟನ್ಸ್‌ ₹60, ಗಣಗಲೆ, ಕಾಕಡ ₹80, ಕನಕಾಂಬರ ₹100 ರಂತೆ ಒಂದು ಮಾರಿಗೆ ಮಾರಾಟವಾಗುತ್ತಿವೆ.

ಹಣ್ಣುಗಳಲ್ಲಿ ದಾಳಿಂಬೆ, ಶಿಮ್ಲಾ ಮತ್ತು ದೆಹಲಿ ಸೇಬಿನ ಬೆಲೆ ಹೆಚ್ಚಳವಾಗಿದೆ. ಪಪ್ಪಾಯ ₹25, ಕಲ್ಲಂಗಡಿ ₹30, ಪಚ್ಚಬಾಳೆ, ಕರಬೂಜ ₹40, ಸಪೋಟ ₹50, ಅನಾನಸ್‌, ಸೀಬೆ, ಸೀತಾಫಲ ₹60, ಕಿತ್ತಳೆ, ಮೂಸಂಬಿ ₹80, ಏಲಕ್ಕಿ ಬಾಳೆ ₹70 – ₹80, ಕಂದ್ರಾಕ್ಷಿ ₹120, ಕಪ್ಪು ದ್ರಾಕ್ಷಿ ₹130, ಕಿವಿಹಣ್ಣು (ಬಾಕ್ಸ್‌) ₹140, ದಪ್ಪದ್ರಾಕ್ಷಿ, ಕಿತ್ತಳೆ ₹180, ಶಿಮ್ಲಾ ಮತ್ತು ದೆಹಲಿ ಸೇಬು ₹160 – ₹200, ದಾಳಿಂಬೆ ₹270 ರಂತೆ ಪ್ರತಿ ಕೆ.ಜಿಗೆ ಮಾರಾಟವಾಗುತ್ತಿವೆ.

Highlights - ಚಳಿಯ ಮುನ್ಸೂಚನೆ; ಬೆಳೆ ಮೇಲೆ ಪರಿಣಾಮ ನಿಯಂತ್ರಣಕ್ಕೆ ಬಂದ ಬಹುತೇಕ ತರಕಾರಿ ದರ ಹಬ್ಬದ ಅಂಗವಾಗಿ ಹೂವುಗಳ ಬೆಲೆಯಲ್ಲಿ ಏರಿಕೆ

Cut-off box - ದರಪಟ್ಟಿ (ಕೆ.ಜಿ ₹ಗಳಲ್ಲಿ) ನಾಟಿ ಬೀನ್ಸ್‌;60ನುಗ್ಗೇಕಾಯಿ; 70ಹಸಿರು ಮೆಣಸಿನಕಾಯಿ; 50ಕ್ಯಾರೆಟ್‌ ; 40ಗೆಡ್ಡೆಕೋಸು; 60ಟೊಮೆಟೊ; 40ರಾಜ್‌ ಈರುಳ್ಳಿ; 100ನಾಟಿ ಬೆಳ್ಳುಳ್ಳಿ; 200ಶಿಮ್ಲಾ ಸೇಬು; 200ಕಪ್ಪು ದ್ರಾಕ್ಷಿ ; 130ಆಸ್ಟ್ರೇಲಿಯಾ ಕಿತ್ತಳೆ; 180ಪಚ್ಚಬಾಳೆ; 40ಏಲಕ್ಕಿಬಾಳೆ; 80ದಾಳಿಂಬೆ; 270ಸಪೋಟ; 60ಕಂದ್ರಾಕ್ಷಿ; 120

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.