ನಾಗಮಂಗಲ: ಅಯೋಧ್ಯೆಯ ಶ್ರೀರಾಮ ಮಂತ್ರಾಕ್ಷತೆಯನ್ನು ಪೂಜಿಸುವ ಪ್ರಯುಕ್ತ, ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ನಾರಗೋನಹಳ್ಳಿಯ ಗವಿರಂಗನಾಥಸ್ವಾಮಿ ದೇವಾಲಯದಲ್ಲಿ ಮಾಂಸ ನೈವೇದ್ಯವಿಡುವ ವಾಡಿಕೆಯನ್ನೇ ಗ್ರಾಮಸ್ಥರು ತ್ಯಜಿಸಿದ್ದಾರೆ.
ದೇವಾಲಯದಲ್ಲಿ ಸಂಕ್ರಾಂತಿ ಹಬ್ಬದ ಮಾರನೇ ದಿನ ದೇವರಿಗೆ ಮಾಂಸಾಹಾರ ನೈವೇದ್ಯವಿಟ್ಟು ಸಂಬಂಧಿಕರು ಹಾಗೂ ಸ್ನೇಹಿತರನ್ನು ಮನೆಗೆ ಊಟಕ್ಕೆ ಕರೆಯುವುದು ವಾಡಿಕೆ. ಆದರೆ ಆ ಸಮಯದಲ್ಲೇ ಗ್ರಾಮದ ಪ್ರತೀ ಮನೆಗೆ ಮಂತ್ರಾಕ್ಷತೆ ತಲುಪಿರುವುದರಿಂದ, ಮಾಂಸಾಹಾರವನ್ನು ತ್ಯಜಿಸಿ ಮಂತ್ರಾಕ್ಷತೆಯನ್ನು ಪೂಜಿಸುತ್ತಿದ್ದಾರೆ.
ಗ್ರಾಮದ ರಾಜಬೀದಿಗಳಲ್ಲಿ ಕೇಸರಿ ಧ್ವಜ ಬಂಟಿಂಗ್‌ಗಘಳು ರಾರಾಜಿಸುತ್ತಿವೆ. ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಟ್ರ್ಯಾಕ್ಟರ್ ರ‍್ಯಾಲಿಯೂ ಶುಕ್ರವಾರ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.