ADVERTISEMENT

ಬೆಳಕವಾಡಿ | ಕಾಲುವೆಯಲ್ಲಿ ಮುಳುಗಿ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 2 ಮೇ 2025, 14:01 IST
Last Updated 2 ಮೇ 2025, 14:01 IST

ಬೆಳಕವಾಡಿ: ಸಮೀಪದ ನೆಟ್ಕಲ್ ಗ್ರಾಮದ ಬಳಿ ಬೆಂಗಳೂರಿಗೆ ನೀರು ಸರಬರಾಜು ಆಗುವ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿ, ತಾಲ್ಲೂಕಿನ ರಾಗಿ ಬೊಮ್ಮನಹಳ್ಳಿಯ ಆರ್.ಎನ್. ಕಿರಣ್ (25) ನೀರಿನಲ್ಲಿ ಮುಳುಗಿ ಬುಧವಾರ ಸಂಜೆ ಮೃತಪಟ್ಟರು.

ಕಿರಣ್ ಬೆಂಗಳೂರಿನಲ್ಲಿ ವಾಸವಿದ್ದು, ಕಂಸಾಗರದ ಸ್ನೇಹಿತನ ಮನೆಗೆ ಹಬ್ಬಕ್ಕೆ ಹೋಗಿದ್ದರು. ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ನುರಿತ ಈಜುಗಾರರು ಕಾಲುವೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಶವವನ್ನು ಹೊರತಂದರು.

ಮೃತನ ತಂದೆ ಎನ್. ನಾಗೇಂದ್ರ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.