ADVERTISEMENT

ನಾಗಮಂಗಲ: ಸಿಡಿಲು ಬಡಿದು ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 14:35 IST
Last Updated 13 ಜುಲೈ 2020, 14:35 IST
ತಾಲ್ಲೂಕಿನ ತಿಗಳರಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿತಕ್ಕೆ ಯುವಕ ಮತ್ತು ಮೇಕೆಗಳು ಮೃತಪಟ್ಟಿರುವುದು
ತಾಲ್ಲೂಕಿನ ತಿಗಳರಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿತಕ್ಕೆ ಯುವಕ ಮತ್ತು ಮೇಕೆಗಳು ಮೃತಪಟ್ಟಿರುವುದು   

ನಾಗಮಂಗಲ: ಸೋಮವಾರ ಸಂಜೆ ಸುರಿದ ಗುಡುಗು ಮಿಂಚಿನ ಮಳೆಯಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿದ್ದು, ಮತ್ತಿಬ್ಬರಿಗೆ ಗಂಭೀರವಾಗಿ ಗಾಯಗಳಾಗಿವೆ.

ತಾಲ್ಲೂಕಿನ ಬೆಳ್ಳೂರು ಹೋಬಳಿಯ ತಿಗಳರಹಳ್ಳಿಯ ಬಳಿ ಇರುವ ಗುಡ್ಡದಲ್ಲಿ ಮೂವರು ಆಡು ಮೇಯಿಸಲು ಹೋಗಿದ್ದಾಗ ಸಂಜೆ 4.30ರ ಸಮಯದಲ್ಲಿ ಮಳೆ ಬಂದಿದೆ. ಗುಡ್ಡದಲ್ಲೇ ಇರುವ ಆಲದ ಮರವೊಂದರ ಕೆಳಗೆ ನಿಂತುಕೊಂಡಿದ್ದ ವೇಳೆ ಸಿಡಿಲು ಬಡಿದು ಗ್ರಾಮದ ಪ್ರತಾಪ್ (24) ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಲ್ಲದೇ, ಮೃತನ ತಂದೆ ಕಾಂತರಾಜು (50) ಮತ್ತು ಸೋದರ ಪ್ರಶಾಂತ್ (20) ಗಂಭೀರವಾಗಿ ಗಾಯಗೊಂಡಿದ್ದು, ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲು ಬಡಿತಕ್ಕೆ ಎರಡು ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿವೆ.

ADVERTISEMENT

ಸ್ಥಳಕ್ಕೆ ಬೆಳ್ಳೂರು ಗ್ರಾಮಾಂತರ‌ ಪೋಲಿಸ್ ಠಾಣೆಯ‌ ಸಬ್ ಇನ್‌ಸ್ಪೆಕ್ಟರ್‌ ದಯಾನಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.