ADVERTISEMENT

ಅಧಿಕಾರಿಗಳ ಬೇಜವಾಬ್ದಾರಿ: ಸಚಿವರ ತರಾಟೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:20 IST
Last Updated 7 ಫೆಬ್ರುವರಿ 2011, 10:20 IST

ಪಿರಿಯಾಪಟ್ಟಣ: ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಬೇರೊ ಬ್ಬರ ಮೇಲೆ ಹಾಕಿ ಕೆಲಸದಿಂದ ವಿಮುಖ ರಾಗುವ ಪ್ರವೃತ್ತಿ ತಾಲ್ಲೂಕಿ ನಲ್ಲಿ ಹೆಚ್ಚಾಗಿದೆ ಎಂದು ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಬೇಜವಾ ಬ್ದಾರಿ ಉತ್ತರದಿಂದ ಸಿಡಿಮಿಡಿಗೊಂಡ ಸಚಿವರು ಬಹುತೇಕ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಕೃಷಿ ಇಲಾಖೆಯಿಂದ ಅರಿವು ಮೂಡಿಸಲು ಅದರಲ್ಲೂ ಬಯೋ ಫರ್ಟಿಲೈಸರ್ಸ್‌ ಮತ್ತು ಪೆಸ್ಟಿಸೈಡ್‌ಗಳ ಬಳಕೆ ಕುರಿತು ನಿರ್ಲಕ್ಷ್ಯ ತೋರಿಸುತ್ತಿರುವುದಾಗಿ ಕೃಷಿ ಸಹಾಯಕ ನಿರ್ದೇಶಕ ರಾಜು ಅವರನ್ನು ತರಾಟೆಗೆ ತೆಗೆದು ಕೊಂಡರು. ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆ ಕುರಿತು ಸರ್ಕಾರಿ ನಿಯಮಾವಳಿ ಪ್ರಕಾರ ಗ್ರಾಮ ಸಭೆ ನಡೆಸದೆ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸರ್ಕಾರ ನಿಯಮಾ ವಳಿ ಯಂತೆ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಎಲ್ಲ ಅಧಿಕಾರಿಗಳಿಗೆ ಆದೇಶಿಸಿದರು.

ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಅತ್ತಿಗೋಡು ಸೇರಿದಂತೆ ಮೂರು ಹಳ್ಳಿಗಳಲ್ಲಿ ಕಾಮಗಾರಿ ಪ್ರಾರಂಭಿಸದ ಭೂಸೇನಾ ನಿಗಮದ ಎಇಇ ರವೀಂದ್ರ ಅವರಿಗೆ ನೋಟಿಸ್ ನೀಡುವಂತೆ ಜಿ.ಪಂ. ಸಿಇಓ ಅವರಿಗೆ ಆದೇಶಿಸಿದರು. ಈ ಸಂದರ್ಭದಲ್ಲಿ ಲ್ಯಾಂಡ್ ಆರ್ಮಿಯವರಿಗೆ ಕಾಮಗಾರಿ ನೀಡದಂತೆ ಶಾಸಕ ಕೆ.ವೆಂಕಟೇಶ್ ತಿಳಿಸಿದರು. ಅಪೂರ್ಣ ಗೊಂಡಿರುವ ಸರ್ಕಾರಿ ಐಟಿಐ ಮತ್ತು ಮಹಿಳಾ ಪದವಿ ಪೂರ್ವ ಕಾಲೇಜು ಕಟ್ಟಡ ಪೂರ್ಣಗೊಳಿಸಲು ಹೆಚ್ಚುವರಿ ಯಾಗಿ 85 ಲಕ್ಷ ರೂಪಾಯಿ ವೆಚ್ಚ ತಗುಲುವಂತೆ ಮಾಡಿದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಲೋಕೋಪಯೋಗಿ ಇಲಾಖೆಯ ಎಇಇ ತಿಮ್ಮಯ್ಯ ಅವರ ವಿರುದ್ಧ ಹರಿಹಾಯ್ದ ಸಚಿವರು ‘ಈ ನಷ್ಟಕ್ಕೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಿ ನೋಟಿಸ್ ನೀಡಲಾಗುತ್ತದೆ ಇದಕ್ಕೆ ಸೂಕ್ತ ಉತ್ತರ ನೀಡಿ’ ಎಂದರು.

ಎಸ್‌ಎಸ್‌ಎಲ್‌ಸಿಯಲ್ಲಿ ಶೂನ್ಯ ಫಲಿತಾಂಶ ಸಾಧನೆ ಮಾಡಿರುವ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಇಓ ಲೋಕೇಶ್ ಅವರಿಗೆ ಸೂಚಿಸಿದರು.ನವಜಾತ ಶಿಶುಗಳ ಮರಣದ ಸಂಖ್ಯೆ ಜಿಲ್ಲೆಯಲ್ಲಿಯೆ ಅತಿ ಹೆಚ್ಚಾಗಿ ತಾಲ್ಲೂಕಿನಲ್ಲಿ ದಾಖಲಾಗುತ್ತಿರು ವುದಕ್ಕೆ ಆತಂಕ ವ್ಯಕ್ತಪಡಿಸಿದ ಸಚಿವರು ಸೂಕ್ತ ವಿವರಣೆ ನೀಡುವಂತೆ ಟಿಎಚ್‌ಓ ಡಾ.ಶಶಿಕಲಾ ಅವರಿಗೆ ಸೂಚಿಸಿದರು. ಅವರು ಸೂಕ್ತ ಉತ್ತರ ನೀಡದಾಗ ಅವರ ನೆರವಿಗೆ ಬಂದ ಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಹದೇವ ಸ್ವಾಮಿ ಪ್ರಸೂತಿ ತಜ್ಞೆ ಡಾ.ಮೈಥಿಲಿ ಪಟ್ಟಣ ವಾಸ್ತವ್ಯ ಹೂಡಿಲ್ಲದಿರು ವುದೂ ಸೇರಿದಂತೆ ಹಲವು ಕಾರಣ ದಿಂದ ಈ ರೀತಿಯಾಗಿದೆ ಎಂದು ವಿವರಣೆ ನೀಡಿದರು. ಡಾ.ಮೈಥಿಲಿ ಅವರಿಗೆ ನೋಟಿಸ್ ನೀಡುವಂತೆ ಜಿ.ಪಂ. ಸಿಇಓ ಜಿ.ಸತ್ಯವತಿ ಅವರಿಗೆ ಆದೇಶಿಸಿದರು. ಸಭೆಯಲ್ಲಿ ಎಂಎಲ್‌ಸಿ ಸಿದ್ದರಾಜು, ಜಿ.ಪಂ.ಯೋಜನಾಧಿಕಾರಿ ಗೋಪಾಲ್, ಜಿಲ್ಲಾಧಿಕಾರಿ ಹರ್ಷ ಗುಪ್ತ ಸೇರಿದಂತೆ ಹಲವು ಅಧಿಕಾರಿ ಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.