ADVERTISEMENT

ಆರೋಗ್ಯಾಧಿಕಾರಿ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 4:40 IST
Last Updated 9 ಅಕ್ಟೋಬರ್ 2011, 4:40 IST

ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾ ಧಿಕಾರಿ ಡಾ. ಮಾಲೇಗೌಡ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸು ತ್ತಿದ್ದ ಡಾ. ಅನಿಲ್‌ಕುಮಾರ್ ಅವರಿಂದ ಮಾಹಿತಿ ಪಡೆದರು.  ಈ ಸಂದರ್ಭದಲ್ಲಿ ಜನಪಜ್ಞಾ ಸಂಸ್ಥೆ ನೀಡಿದ ದೂರಿನ ಪರಿಶೀಲನೆ ನಡೆಸಿ. ಸಂಸ್ಥೆಯ ಕಾರ್ಯದರ್ಶಿ ಆನಂದ್ ಅಧ್ಯಕ್ಷ ಮಹದೇವಪ್ಪರವರು ಆಸ್ಪತ್ರೆ ಯಲ್ಲಿ ಔಷಧ ಲಭ್ಯವಿದ್ದರೂ ಮೆಡಿಕಲ್ ಸ್ಟೋರ್‌ಗಳಿಗೆ ಚೀಟಿ ಬರೆದು ಕೊಡಲಾಗುತ್ತಿದೆ. ರಾತ್ರಿ ವೇಳೆ ಅಧಿಕ ಶುಲ್ಕ ವಸೂಲಿ ಮಡಲಾಗುತ್ತಿದೆ, ಇಸಿಜಿ, ಎಕ್ಸರೇ ಸೌಲಭ್ಯ ಆಸ್ಪತ್ರೆಯಲ್ಲಿ ಲಭ್ಯವಿದ್ದರೂ ಹೊರಗಿನ ಲ್ಯಾಬ್‌ಗೆ ಸೂಚನೆ ನೀಡಲಾಗುತ್ತದೆ ಎಂದು ಆರೋಪಿಸಿ, ಪೂರಕ ದಾಖಲೆ ಪ್ರದರ್ಶಿಸಿದರು.

ಜನಪ್ರಜ್ಞಾ ಸಂಸ್ಥೆಯವರಿಗೆ ಲಿಖಿತ ದೂರು ಸಲ್ಲಿಸುವಂತೆ ಸೂಚನೆ ನೀಡಿದರು. ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಲಂಚ ಕೇಳಿದರೆ ಲೋಕಾಯು ಕ್ತರಿಗೆ ದೂರು ನೀಡುವಂತೆ ತಿಳಿಸಿದರು.

ರಕ್ಷಣಾ ವೇದಿಕೆ ಕಂಪಲಾಪುರ ಘಟಕದ ಅಧ್ಯಕ್ಷ ಪ್ರವೀಣ್‌ಕುಮಾರ್ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಇಲ್ಲದೆ ರೋಗಿಗಳು ಪರದಾಡುತ್ತಿರುವ ಗಮನ ಸೆಳೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.