ADVERTISEMENT

ಕಾಡಾನೆಗಳ ದಾಳಿ: ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 9:45 IST
Last Updated 9 ಸೆಪ್ಟೆಂಬರ್ 2011, 9:45 IST

ಎಚ್.ಡಿ.ಕೋಟೆ: ಕಾಡಾನೆಗಳ ಹಿಂಡು ದಾಳಿ ಮಾಡಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಅರಿಶಿಣ, ಕಬ್ಬು ಹಾಗೂ ಇನ್ನಿತರ ಬೆಳೆಗಳನ್ನು ಹಾನಿಗೊಳಿಸಿರುವ ಘಟನೆ ಬುಧವಾರ ರಾತ್ರಿ ತಾಲ್ಲೂಕಿನ ಸಿದ್ದಾಪುರದಲ್ಲಿ ನಡೆದಿದೆ.

ಗ್ರಾಮದ ಎಸ್.ಎಂ. ಚಂದ್ರ, ಮಹದೇವ, ಕಮಲಮ್ಮ ಹಾಗೂ ಇತರೆ ರೈತರ ಜಮೀನುಗಳಲ್ಲಿ ಬೆಳೆಯಲಾಗಿದ್ದ ಅರಿಶಿಣ, ಕಬ್ಬು ಹಾಗೂ ಇನ್ನಿತರ  ಬೆಳೆಗಳಿಗೆ ದಾಳಿ ಇಟ್ಟ ಕಾಡಾನೆಗಳ ಹಿಂಡು ಹಾಳು ಮಾಡಿವೆ.

ಸಾಲ ಮಾಡಿ ಬೆಳೆದ ಬೆಳೆ ಕೈಗೆ ಬರುವ ಸಂದರ್ಭದಲ್ಲಿ ಆನೆಗಳ ದಾಳಿಯಿಂದ ಹಾಳಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಪ ಪರಿಹಾರವನ್ನು ಮಾತ್ರ ನೀಡುತ್ತಿದ್ದು, ಬೆಳೆ ನಷ್ಟದ ಅಂದಾಜನ್ನು ಮಾಡಿ, ನಷ್ಟದ ಆಧಾರದ ಮೇಲೆ ಪರಿಹಾರ  ನೀಡಬೇಕು ಎಂದು ರೈತ ಚಂದ್ರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.