ADVERTISEMENT

ಕೋರ್ಸು, ಕಾಲೇಜು, ಕಾಂಬಿನೇಷನ್ ವಗೈರೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 5:00 IST
Last Updated 15 ಜೂನ್ 2012, 5:00 IST

ಮೈಸೂರು: ನಗರದ ಪದವಿ ವಿದ್ಯಾಲಯಗಳಲ್ಲಿ ಈಗ ಪ್ರವೇಶ ಸುಗ್ಗಿ. ಕೆಲವು ಕಾಲೇಜುಗಳು ಈಗಾಗಲೇ ಆಯ್ಕೆ ಪಟ್ಟಿ ಪ್ರಕಟಿಸಿವೆ, ಮತ್ತೆ ಕೆಲ ಕಾಲೇಜುಗಳಲ್ಲಿ ಪಟ್ಟಿ ಸಿದ್ಧತೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸ್ವಾಯತ್ತ ಸಂಸ್ಥೆಗಳು ಶೀಘ್ರದಲ್ಲೇ ಮೆರಿಟ್ ಲಿಸ್ಟ್ ಪ್ರಕಟಿಸಲಿವೆ. ಪಟ್ಟಿಯಲ್ಲಿ ಹೆಸರು ಇಲ್ಲದವರು ಮ್ಯಾನೇಜ್‌ಮೆಂಟ್, ಪೇಮೆಂಟ್ ಕೋಟಾ, ಕಾಲೇಜು, ಕಾಂಬಿನೇಷನ್, ಕೋರ್ಸ್ ಬದಲಾವಣೆಯತ್ತ ಚಿತ್ತ ಹರಿಸಬೇಕಾಗುತ್ತದೆ.

  ವಿಶ್ವಗ್ರಾಮ ಪರಿಕಲ್ಪನೆಯ ಸಾಕಾರದ ಈ ಯುಗದಲ್ಲಿ ಕ್ರಿಯಾಶೀಲತೆ, ಆಸಕ್ತಿ, ಶ್ರದ್ಧೆ, ಏಕಾಗ್ರತೆ, ವ್ಯವಸ್ಥಿತ ಅಧ್ಯಯನ ಗುಣಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಂಡರೆ ಶೈಕ್ಷಣಿಕ ಹಾದಿಯೂ ಸುಗಮ ಜತೆಗೆ ಗುರಿ ಸಾಧನೆಯೂ ಸುಲಭ. ಹೆಚ್ಚುತ್ತಿರುವ ಶಿಕ್ಷಣ ಸಂಸ್ಥೆಗಳು, ಹೊಸ ಪತ್ರಿಕೆ, ಎಫ್.ಎಂ ರೇಡಿಯೋ, ಟಿವಿ ವಾಹಿನಿಗಳ ಉಗಮ, ಸರ್ಕಾರೇತರ ಸಂಸ್ಥೆಗಳ ಬಾಹುಳ್ಯ, ಸರ್ಕಾರಿ ಯೋಜನೆ ಗಳು, ನಾಗರಿಕ ಸೇವಾ ಹುದ್ದೆಗಳ ನೇಮಕ ಪರೀಕ್ಷೆಗಳು ಅವಕಾಶಗಳ ಸ್ವರ್ಗವನ್ನೇ ಸೃಷ್ಟಿಸಿವೆ. ನಗರದ
ವಿವಿಧ ಕಾಲೇಜುಗಳ ವಾಣಿಜ್ಯ, ಕಲಾ, ನಿರ್ವಹಣೆ, ಕಾನೂನು ಕೋರ್ಸುಗಳು...

ಮಹಾರಾಜ ಕಾಲೇಜು: ಮೈಸೂರು ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜು ಮಹಾರಾಜ ಮಹಾವಿದ್ಯಾಲ ಯದಲ್ಲಿ ಕಲಾ ವಿಭಾಗದಲ್ಲಿ ಸಂಯೋಜನೆ ಆಯ್ಕೆಗೆ ಬಹಳಷ್ಟು ಅವಕಾಶಗಳಿವೆ. ಯಾವುದೇ ವಿಭಾಗದಲ್ಲಿ ಪಿಯುಸಿ ಪಾಸಾದವರು ಈ ಕೋರ್ಸುಗಳಿಗೆ ದಾಖಲಾಗ ಬಹುದು. ಇನ್ನು ಪಿಯುಸಿಯಲ್ಲಿ ವಾಣಿಜ್ಯ ಓದಿದವರು ಬಿಬಿಎಂ (ಬ್ಯಾಚುಲರ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್), ಬಿ.ಕಾಂ ಪದವಿಗೆ ದಾಖಲಾಗಬಹುದು. ಮೆರಿಟ್, ಮೀಸಲಾತಿ ಆಯ್ಕೆಯ ಮಾನದಂಡಗಳು. ನುರಿತ ಶಿಕ್ಷಕರು, ಸುಸಜ್ಜಿತ ಗ್ರಂಥಾಲಯ, ಆಂತರಿಕ ಗುಣಾತ್ಮಕ ಭರವಸೆ ಘಟಕ (ಐಸಿಎಸಿ) ಇತ್ಯಾದಿ ಇಲ್ಲಿನ ವಿಶೇಷತೆಗಳು. ಮಾಹಿತಿಗೆ ವೆಬ್‌ತಾಣ ಡಿಡಿಡಿ.್ಠ್ಞಜಿಞ.ಚ್ಚ.ಜ್ಞಿಗೆ ಭೇಟಿ ನೀಡಿ ್ಚಟ್ಞಠಿಜಿಠ್ಠಿಛ್ಞಿಠಿ ್ಚಟ್ಝ್ಝಛಿಜಛಿ ನಲ್ಲಿ ಮಹಾರಾಜ ಕಾಲೇಜು ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು. ಕಾಲೇಜಿನ ದೂರವಾಣಿ 0821 2419354 ಸಂಪರ್ಕಿಸಿ.

ಕಲಾ ವಿಭಾಗದಲ್ಲಿ ಲಭ್ಯ ಇರುವ ಸಂಯೋಜನೆಗಳು...

ಎಚ್‌ಇಕೆ: ಇತಿಹಾಸ ಅರ್ಥಶಾಸ್ತ್ರ ಕನ್ನಡ
ಎಚ್‌ಇಎಚ್: ಇತಿಹಾಸ  ಅರ್ಥಶಾಸ್ತ್ರ, ಹಿಂದಿ
ಎಚ್‌ಇಎಸ್: ಇತಿಹಾಸ, ಅರ್ಥಶಾಸ್ತ್ರ, ಸಂಸ್ಕೃತ
ಎಚ್‌ಇಯು: ಇತಿಹಾಸ, ಅರ್ಥಶಾಸ್ತ್ರ, ಉರ್ದು
ಎಚ್‌ಇಜಿ: ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ
ಎಚ್‌ಇಪಿ: ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ
ಜಿಎಸ್‌ಪಿ: ಭೂಗೋಳಶಾಸ್ತ್ರ, ಸಮಾಜಶಾಸ್ತ್ರ,   ಮನಃಶಾಸ್ತ್ರ
ಎಚ್‌ಇಇ: ಇತಿಹಾಸ, ಅರ್ಥಶಾಸ್ತ್ರ, ಇಂಗ್ಲಿಷ್
ಕೆಎಸ್‌ಪಿ: ಕನ್ನಡ, ಸಮಾಜಶಾಸ್ತ್ರ, ತತ್ವಶಾಸ್ತ್ರ
ಜೆಇಎಫ್: ಪತ್ರಿಕೋದ್ಯಮ, ಅರ್ಥಶಾಸ್ತ್ರ, ಫಂಕ್ಷನಲ್ ಇಂಗ್ಲಿಷ್
ಎಚ್‌ಕೆಜೆ: ಇತಿಹಾಸ, ಕನ್ನಡ, ಪತ್ರಿಕೋದ್ಯಮ
ಇಪಿಸಿ: ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಹಕಾರ
ಎಚ್‌ಇಸಿ: ಇತಿಹಾಸ, ಅರ್ಥಶಾಸ್ತ್ರ, ಸಹಕಾರ
ಎಚ್‌ಕೆಎಲ್: ಇತಿಹಾಸ, ಕನ್ನಡ, ಭಾಷಾಶಾಸ್ತ್ರ
ಜೆಇಪಿ: ಪತ್ರಿಕೋದ್ಯಮ, ಅರ್ಥಶಾಸ್ತ್ರ, ಮನಃಶಾಸ್ತ್ರ
ಎಚ್‌ಇ ಎ-ಎಂ: ಇತಿಹಾಸ, ಅರ್ಥಶಾಸ್ತ್ರ,ಪುರಾತತ್ವ ಶಾಸ್ತ್ರ

ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು: ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ, ಬಿ.ಬಿ.ಎಂ, ಬಿ.ಕಾಂ. ಪದವಿ ಅಧ್ಯಯನಕ್ಕೆ ಪೂರಕ ವಾತಾವರಣ ಇದ್ದು, ಉದ್ಯೋಗ ಮಾರ್ಗದರ್ಶನ ಘಟಕ, ಸುಸಜ್ಜಿತ ಗ್ರಂಥಾಲಯ, ಗಣಕಾಲಯ ಇಲ್ಲಿನ ವಿಶೇಷತೆಗಳು. ಮಾಹಿತಿಗೆ ವೆಬ್‌ತಾಣ:ಡಿಡಿಡಿ.ಞಚ್ಜಚ್ಞಚ್ಛಜ್ಚ.್ಚಟಞ ಅಥವಾ ದೂರವಾಣಿ: 0821 2512065 ಸಂಪರ್ಕಿಸಿ.

ಕಲಾ ವಿಭಾಗದಲ್ಲಿ ಇಲ್ಲಿರುವ ಸಂಯೋಜನೆಗಳು..

ಎಚ್‌ಇಜಿ: ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ
ಎಚ್‌ಇಎಸ್: ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ
ಎಚ್‌ಜಿಕೆ: ಇತಿಹಾಸ, ಭೂಗೋಳಶಾಸ್ತ್ರ, ಕನ್ನಡ
ಸಿಪಿಎಸ್: ಅಪರಾಧಶಾಸ್ತ್ರ, ಮನಃಶಾಸ್ತ್ರ, ಸಮಾಜಶಾಸ್ತ್ರ
ಜೆಇಇ: ಪತ್ರಿಕೋದ್ಯಮ ಅರ್ಥಶಾಸ್ತ್ರ, ಇಂಗ್ಲಿಷ್
ಮಹಾಜನ ಕಾನೂನು ಕಾಲೇಜು: ಐದು ವರ್ಷಗಳ ಕಾನೂನು ಪದವಿ ಅಧ್ಯಯನಕ್ಕೆ ಇಲ್ಲಿ ಅವಕಾಶ ಇದೆ. ಹೆಚ್ಚಿನ ಮಾಹಿತಿಗೆ ಡಿಡಿಡಿ.ಚ್ಟ್ಟಿಞ್ಝ್ಚ.ಜ್ಞಿ ಸಂಪರ್ಕಿಸಿರಿ.

ಸೇಂಟ್ ಫಿಲೋಮಿನ ಕಾಲೇಜು: ಬನ್ನಿಮಂಟಪ ಸಮೀಪ ಬೆಂಗಳೂರು- ಮೈಸೂರು ರಸ್ತೆಯಲ್ಲಿರುವ ಸೇಂಟ್ ಫಿಲೋಮಿನಾ ಸ್ವಾಯತ್ತ  ಕಾಲೇಜಿನಲ್ಲಿ ಬಿ.ಎ, ಬಿಎಸ್‌ಡಬ್ಲ್ಯು, ಬಿ.ಕಾಂ., ಬಿಬಿಎಂ ಕಲಿಯಲು ಅವಕಾಶಗಳಿವೆ. ಅಧ್ಯಯನಕ್ಕೆ ಅಗತ್ಯ ಇರುವ ಸಕಲ ವ್ಯವಸ್ಥೆಗಳು ಇಲ್ಲಿವೆ. ಮಾಹಿತಿಗೆ ವೆಬ್‌ತಾಣ: ಡಿಡಿಡಿ.ಠಿಜ್ಝಿಟ.ಜ್ಞಿ ಅಥವಾ ದೂ: 0821 2490728, 2496155 ಸಂಪರ್ಕಿಸಿ.

ಕಲಾ ವಿಭಾಗದಲ್ಲಿ ಇಲ್ಲಿರುವ ಸಂಯೋಜನೆಗಳು..
ಎಚ್‌ಇಪಿ: ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ
ಇಎಚ್‌ಪಿ: ಇಂಗ್ಲಿಷ್, ಇತಿಹಾಸ, ರಾಜ್ಯಶಾಸ್ತ್ರ
ಇಎಸ್‌ಪಿ: ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ
ಇಎಸ್‌ಪಿ: ಇಂಗ್ಲಿಷ್, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ
ಇಎಚ್‌ಕೆ: ಇಂಗ್ಲಿಷ್, ಇತಿಹಾಸ, ಕನ್ನಡ
ಇಎಸ್‌ಕೆ: ಇತಿಹಾಸ, ಸಮಾಜಶಾಸ್ತ್ರ, ಕನ್ನಡ
ಇಎಸ್‌ಪಿ: ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನಃಶಾಸ್ತ್ರ
ಇಎಚ್‌ಜೆ: ಅರ್ಥಶಾಸ್ತ್ರ, ಇತಿಹಾಸ, ಪತ್ರಿಕೋದ್ಯಮ
ಇಎಚ್‌ಜೆ: ಇಂಗ್ಲಿಷ್, ಇತಿಹಾಸ ಪತ್ರಿಕೋದ್ಯಮ
ಇಎಸ್‌ಜೆ: ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮ
ಇಎಸ್‌ಜೆ: ಇಂಗ್ಲಿಷ್, ಸಮಾಜಶಾಸ್ತ್ರ, ಪತ್ರಿಕೋದ್ಯಮ

ಅಧ್ಯಯನ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಾಗ ಕೋರ್ಸಿ ಗಿರುವ ಬೇಡಿಕೆ, ಉದ್ಯೋಗಾವಕಾಶದ ಜತೆಗೆ ವಿದ್ಯಾರ್ಥಿ ಯ ಕೌಶಲ, ಪ್ರತಿಭೆ, ಆಸಕ್ತಿಗಳು ಪ್ರಮುಖ ಪಾತ್ರ ವಹಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.