ಮೈಸೂರು: ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿ ಬೆಟ್ಟಕ್ಕೆ ನಿತ್ಯ ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ಈ ನಡುವೆ ಭಕ್ತರ ಸೋಗಿನಲ್ಲಿ ಬೆಟ್ಟಕ್ಕೆ ಬರುವ ಪ್ರೇಮಿಗಳು ಅದೆಷ್ಟೊ ಮಂದಿ. ಚಾಮುಂಡಿ ಬೆಟ್ಟದ ತಡೆಗೋಡೆ, ಅರಣ್ಯ ಪ್ರದೇಶ, ಉತ್ತನಹಳ್ಳಿ ಹೋಗುವ ರಸ್ತೆಯಲ್ಲಿ ಪ್ರೇಮಿಗಳು, ಪುಂಡ ಹುಡುಗರ ಕಾಟ ಹೆಚ್ಚು.
ಇದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಆಪರೇಷನ್ ಲವರ್ಸ್ ಕಾರ್ಯಾ ಚರಣೆಯನ್ನು ಕಳೆದ 25 ದಿನಗಳಿಂದ ಆರಂಭಿ ಸಿದ್ದಾರೆ. ಸರಗಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರಂಭಿಸಲಾಗಿದ್ದ ಆಪರೇಷನ್ ಶುಭೋದಯ, ಆಪ ರೇಷನ್ ಸನ್‌ಸೆಟ್ ಮಾದ ರಿಯಲ್ಲೇ ಇದು ಕಾರ್ಯಾಚರಣೆ ನಡೆಸಲಿದೆ.
ಚಾಮುಂಡಿ ಬೆಟ್ಟದ ಸುತ್ತಮುತ್ತ ಕೊಲೆ, ಸುಲಿಗೆ, ಜೂಜು, ಅನೈತಿಕ ಚಟುವಟಿಕೆಗಳು, ಹುಟ್ಟುಹಬ್ಬದ ಪಾರ್ಟಿ ಆಗಾಗ್ಗೆ ನಡೆಯುತ್ತಿರು ತ್ತವೆ. ಇನ್ನು ಪ್ರೇಮಿಗಳ ಸರಸ-ಸಲ್ಲಾಪಕ್ಕೇನು ಇಲ್ಲಿ ಕಡಿಮೆ ಇಲ್ಲ. ಬೆಟ್ಟಕ್ಕೆ ಹೋಗುವ ರಸ್ತೆಯ ತಡೆಗೋಡೆ, ಉತ್ತನಹಳ್ಳಿ ಮಾರ್ಗದ ರಸ್ತೆಯ ನಿರ್ಜನ ಸ್ಥಳದಲ್ಲಿ ಪ್ರೇಮಿಗಳ ಸಂಖ್ಯೆ ಹೆಚ್ಚು.
ಪೊಲೀಸರು ಆಗಾಗ್ಗೆ ಇಂತಹ ಸ್ಥಳಗಳಲ್ಲಿ ಬೀಟ್ ಹಾಕಿ ಎಚ್ಚರಿಕೆ ನೀಡುತ್ತಿದ್ದರೂ ಪ್ರೇಮಿಗಳ ಸಂಖ್ಯೆ ಕಡಿಮೆ ಆಗುತ್ತಿರಲಿಲ್ಲ.
ಈಚಿನ ದಿನಗಳಲ್ಲಿ ಯುವಕರು ಮತ್ತು ಯುವತಿಯರು ತಮ್ಮ ಹುಟ್ಟುಹಬ್ಬವನ್ನು ಬೆಟ್ಟದ ರಸ್ತೆ ಮತ್ತು ಬೆಟ್ಟಕ್ಕೆ ಹಾದು ಹೋಗುವ ರಸ್ತೆ ಬದಿಯಲ್ಲಿ ಇರುವ ಗೋಪುರದಲ್ಲಿ ಆಚರಿಸಿ ಕೊಳ್ಳುತ್ತಿದ್ದಾರೆ. ಕೇಕ್ ಕಟ್ ಮಾಡಿ, ತಿಂಡಿ ತಿಂದು, ತಂಪು ಪಾನೀಯಗಳನ್ನು ಕುಡಿದು ತ್ಯಾಜ್ಯ, ಬಾಟಲಿಗಳನ್ನು ಅಲ್ಲೇ ಎಸೆಯುತ್ತಾರೆ. ಇನ್ನು ಕೆಲವರು ಹುಟ್ಟುಹಬ್ಬಕ್ಕೆ ಗುಂಡಿನ ಪಾರ್ಟಿ ನೀಡುತ್ತಾರೆ. ಕುಡಿದ ಮತ್ತಿನಲ್ಲಿ ಮದ್ಯದ ಬಾಟಲಿಗಳನ್ನು ಒಡೆದು ಹಾಕುತ್ತಾರೆ. ಗಾಜಿನ ಚೂರು ಗಳು ಗೋಪುರ ಮತ್ತು ರಸ್ತೆ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ.
ಅಪರಿಚಿತ ಶವ ಪತ್ತೆ, ಕೊಲೆ, ಸುಲಿಗೆ, ಜೂಜು ಆಗಾಗ್ಗೆ ಬೆಟ್ಟದ ಆಸುಪಾಸಿನಲ್ಲಿ ನಡೆ ಯುತ್ತಿರುತ್ತದೆ. ಮತ್ತೆ ಕೆಲವರು ಬಂಡೆ ಮೇಲೆ ಹತ್ತಿ ಜೀವದ ಹಂಗನ್ನೂ ತೊರೆದು ಮೋಜಿನಲ್ಲಿ ತೊಡಗುತ್ತಾರೆ. ಬಂಡೆಯಿಂದ ಆಯತಪ್ಪಿ ಬಿದ್ದು ಗಾಯಗೊಂಡವರು ಅದೆಷ್ಟೊ ಮಂದಿ. ಯುವಕರು ರಾತ್ರಿ ವೇಳೆ ವೇಗವಾಗಿ ಕಾರು ಚಾಲನೆ ಮಾಡುತ್ತಾರೆ. ಈಗಾಗಲೇ ಅನೇಕ ಕೆಲವರು ವೇಗವಾಗಿ ಕಾರು ಚಾಲನೆ ಮಾಡಿ ಬಂಡೆಗಳಿಗೆ ಗುದ್ದಿ ಪ್ರಾಣ ಕಳೆದುಕೊಂಡಿದ್ದಾರೆ.
ಇವುಗಳಿಗೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆ.ಆರ್.ಠಾಣೆ ಪೊಲೀಸರು ಅಪರೇಷನ್ ಲವರ್ಸ್ ಕಾರ್ಯಾ ಚರಣೆ ಆರಂಭಿಸಿದರು. ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದ ಸುಮಾರು 50 ಜೋಡಿ ಪ್ರೇಮಿಗಳನ್ನು ಠಾಣೆಗೆ ಕರೆತಂದು ಬುದ್ಧಿವಾದ ಹೇಳಿದ್ದಾರೆ. ಎರಡನೇ ಬಾರಿಗೆ ಸಿಕ್ಕಿ ಬಿದ್ದವರಿಗೆ ದೂರವಾಣಿ ಸಂಖ್ಯೆ ಮತ್ತು ವಿಳಾಸ ಪಡೆದು ಪೋಷಕರಿಗೆ ಮಾಹಿತಿ ನೀಡುವುದಾಗಿ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತಿದೆ.
ಶಾಲಾ-ಕಾಲೇಜಿಗೆ ಹೋಗದೆ ಕೆಲವು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬೆಟ್ಟಕ್ಕೆ ಬಂದು ಕಾಲಹರಣ ಮಾಡುತ್ತಿದ್ದರು. ಬೆಳಿಗ್ಗೆ ಮತ್ತು ಸಂಜೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬೆಟ್ಟಕ್ಕೆ ಬರುತ್ತಿದ್ದರು. ರಾತ್ರಿ 10 ಗಂಟೆವರೆಗೂ ಕೆಲವರು ತಡೆಗೋಡೆ ಮೇಲೆ ಕುಳಿತು ಕತ್ತಲಲ್ಲಿ ಸರಸದಲ್ಲಿ ತೊಡಗುತ್ತಿದ್ದರು. ಪೊಲೀಸ್ ಜೀಪ್ ಬಂದ ಕೂಡಲೇ ಕಾಲ್ಕೀಳುತ್ತಿದ್ದರು.
`ಆಪರೇಷನ್ ಲವರ್ಸ್ ಕಾರ್ಯಾ ಚರಣೆ ಆರಂಭವಾದ ಬಳಿಕ ಪ್ರೇಮಿಗಳ ಸಂಖ್ಯೆ ಕಡಿಮೆ ಆಗಿದೆ. ಕಣ್ಣಿಗೆ ಬೀಳುವ ಪ್ರೇಮಿಗಳನ್ನು ಠಾಣೆಗೆ ಕರೆದು ಬುದ್ಧಿವಾದ ಹೇಳಿ ಕಳುಹಿಸಲಾಗಿದೆ. ಹುಟ್ಟುಹಬ್ಬ ಆಚರಿಸಿಕೊಳ್ಳಲು ಬರುವ ಯುವಕರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಆಪರೇಷನ್ ಲವರ್ಸ್ ತಂಡ ಬೆಟ್ಟಕ್ಕೆ ದಿಢೀರ್ ಭೇಟಿ ನೀಡಿ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಾಗಿ ಕಾರ್ಯಾಚರಣೆ ನಡೆಸಲಾಗುವುದು~ ಎಂದು ಕೆ.ಆರ್.ಠಾಣೆ ಇನ್ಸ್‌ಪೆಕ್ಟರ್ ಸಿ.ಡಿ.ಜಗದೀಶ್ `ಪ್ರಜಾವಾಣಿ~ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.