ADVERTISEMENT

ತಿ.ನರಸೀಪುರ: ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 8:25 IST
Last Updated 4 ಡಿಸೆಂಬರ್ 2012, 8:25 IST

ತಿ.ನರಸೀಪುರ: ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಈಚೆಗೆ ಯಶಸ್ವಿಯಾಗಿ ನಡೆಯಿತು. ತಾಲ್ಲೂಕಿನ ತುಂಬಲ ಗ್ರಾಮದ ಶಾಲೆಯಲ್ಲಿ ನಡೆದ ಹಳೇ ಕೆಂಪಯ್ಯನಹುಂಡಿ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಗೆ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಅಂದಾನಿ ಜ್ಯೋತಿ ಚಾಲನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹಾದೇವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಬಸಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನಸ್ರೀನ್ ರೂಹಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ಲೋಕೇಶ್, ಶಿಕ್ಷಣ ಸಂಯೋಜಕರಾದ ಎಚ್.ಎಂ.ಶಂಕರ್, ಪ್ರಕಾಶ್, ಸಿಆರ್‌ಪಿ ಸುಬ್ಬಶೆಟ್ಟಿ, ಶಿಕ್ಷಕರ ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಶಿವಣ್ಣ, ಮುಖ್ಯ ಶಿಕ್ಷಕ ಗಂಗಾಧರ್‌ಸ್ವಾಮಿ ಹಾಜರಿದ್ದರು.
ವಿದ್ಯಾನಿಕೇತನ: ಪಟ್ಟಣದ ವಾಸವಿ ಲಯನ್ಸ್ ವಿದ್ಯಾನಿಕೇತನದಲ್ಲಿ ನಡೆದ ಪ್ರತಿಭಾ ಕಾರಂಜಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ ನಾಗರಾಜು, ಲಯನ್ಸ್ ಸಂಸ್ಥೆಯ ಹಿರಿಯ ನಿರ್ದೇಶಕ ಎಂ.ವಿ.ಪ್ರಸನ್ನಕುಮಾರ್ ಉದ್ಘಾಟಿಸಿದರು.

ಕ್ಲಸ್ಟರ್ ಅಧಿಕಾರಿ ಕೆ.ಪಿ.ಮಹಾದೇವಸ್ವಾಮಿ, ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ ನಾಗರಾಜು, ಮುಖ್ಯ ಶಿಕ್ಷಕಿ ಗೀತಾ, ವತ್ಸಲಾ, ಶಿಕ್ಷಕ ನಾಗೇಂದ್ರ, ಶಿವಶಂಕರಮೂರ್ತಿ, ಪುಟ್ಟರಾಜು ಹಾಜರಿದ್ದರು.

ಬೈರಾಪುರ ಶಾಲೆ: ಯಡದೊರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಬೈರಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಚೀಕಾ ಉದ್ಘಾಟಿಸಿದರು.

ಶಿಕ್ಷಣ ಸಂಯೋಜಕ ಎಚ್.ಎಂ.ಶಂಕರ್, ಸಿಆರ್‌ಪಿ ಬಿ.ಎನ್.ಶಿವರುದ್ರಸ್ವಾಮಿ, ಮುಖ್ಯಶಿಕ್ಷಕ ಎಸ್.ಕೆ.ರಂಗಸ್ವಾಮಿ, ಬೈರಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾ ವೆಂಕಟೇಶ್, ಬಿ.ಎಂ.ದಿವಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.