ಮೈಸೂರು: ಮಹಾನಗರಪಾಲಿಕೆಯು ಟ್ರೇಡ್ ಲೈಸೆನ್ಸ್ ಹೆಚ್ಚಳ ಮಾಡಿರು ವುದನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಸಂಸ್ಥೆಯು ನಗರದ ಎಲ್ಲ ನರ್ಸಿಂಗ್ ಹೋಮ್ ಮತ್ತು ಕ್ಲಿನಿಕ್‌ಗಳನ್ನು ಏ.25 ರಂದು ಬಂದ್ ಮಾಡಲು ನಿರ್ಧರಿಸಿದೆ.
ಎಂಜಿನಿಯರ್, ವಕೀಲರು, ಚಾರ್ಟರ್ಡ್ ಅಕೌಂಟ್ಸ್ ಮತ್ತು ಹಣಕಾಸು ಸಲಹೆಗಾರರಿಗೆ ಟ್ರೇಡ್ ಲೈಸೆನ್ಸ್ ಶುಲ್ಕ ಹೆಚ್ಚಳದಿಂದ ವಿನಾಯಿತಿ ನೀಡಲಾಗಿದೆ. ಆದರೆ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿಗೆ ಶುಲ್ಕ ಹೆಚ್ಚಳ ಮಾಡಿರುವುದು ಖಂಡನೀಯ.
ಸಂಸ್ಥೆಯ ಸದಸ್ಯರು ಅಲ್ಲದವರು ಮತ್ತು ನೋಂದಾಯಿತ ವೈದ್ಯಕೀಯ ತರಬೇತುದಾರರು ಒಂದು ದಿನದ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಅಂದು ಬೆಳಿಗ್ಗೆ 9 ಗಂಟೆಗೆ ಜೆ.ಕೆ.ಮೈದಾನದಿಂದ ರ‌್ಯಾಲಿ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿ ಸಲ್ಲಿಸಲಾಗುವುದು. ಅಂದು ತುರ್ತು ಪ್ರಕರಣಗಳು ಇದ್ದಲ್ಲಿ ಚಿಕಿತ್ಸೆ ನೀಡ ಲಾಗುವುದು. ಜನರು ಆತಂಕ ಪಡಬೇಕಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.