ಮೈಸೂರು: ಮಹಾರಾಷ್ಟ್ರದಿಂದ ಮಧುಚಂದ್ರಕ್ಕಾಗಿ ನಗರಕ್ಕೆ ಬಂದಿದ್ದ ನವವಿವಾಹಿತೆ ಹೊಟ್ಟೆ ನೋವಿನಿಂದ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಸೋಲಾಪುರ ಜಿಲ್ಲೆ ಮಾನಕಿಯ ರಂಜಿತಾ (21) ಮೃತಪಟ್ಟವರು. ಪತಿ ರಂಜಿತ್ ಜೊತೆಗೆ ಡಿ.28 ರಂದು ನಗರಕ್ಕೆ ಆಗಮಿಸಿದ್ದ ಇವರು, ಮೇಟಗಳ್ಳಿಯ ವಸತಿಗೃಹದಲ್ಲಿ ತಂಗಿದ್ದರು. ಡಿ. 30 ರಂದು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಕೆ.ಆರ್.ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬ ಸದಸ್ಯರಿಗೆ ಹಸ್ತಾಂತರಿಲಾಗಿದೆ. ಎನ್.ಆರ್.ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಆತ್ಯಹತ್ಯೆ
ಮೈಸೂರು: ಹೊಸ ವರ್ಷಾಚಾರಣೆಗೆಂದು ಮನೆಯಿಂದ ಹೊರಹೋದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಕೆ.ಆರ್.ಮಿಲ್ ಕಾಲೋನಿಯ ಸಿ.ಸಂದೀಪ (22) ಮೃತ ಆತ್ಮಹತ್ಯೆ ಮಾಡಿಕೊಂಡವನು. ರಾತ್ರಿ 11.30ಕ್ಕೆ ಮರಳಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿದ್ದ. ಆದರೆ ತಡರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಪೋಷಕರು ಆತಂಕಕ್ಕೆ ಒಳಗಾದರು. ಬಳಿಕ ಶೋಧ ನಡೆಸಿದಾಗ ರೇಲ್ವೆ ಹಳಿ ಸಮೀಪ ಮೃತದೇಹ ಬಿದ್ದಿರುವುದು ಪತ್ತೆಯಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದರು.
ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.