ADVERTISEMENT

ಮಾವುತರ ಗೌರವಧನದಲ್ಲಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 7:34 IST
Last Updated 4 ಅಕ್ಟೋಬರ್ 2017, 7:34 IST
ಮೈಸೂರಿನ ಅರಮನೆ ಅಂಗಳದಲ್ಲಿ ಮಂಗಳವಾರ ಬೀಳ್ಕೊಡುಗೆಗೂ ಮುನ್ನ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಟಿ.ಎಸ್‌.ಸುಬ್ರಮಣ್ಯ, ವಿ.ಏಡುಕುಂಡಲ, ಡಿ.ರಂದೀಪ್‌, ಎಂ.ಕೆ.ಸೋಮಶೇಖರ್‌, ನಾಗರಾಜು ಇದ್ದಾರೆ
ಮೈಸೂರಿನ ಅರಮನೆ ಅಂಗಳದಲ್ಲಿ ಮಂಗಳವಾರ ಬೀಳ್ಕೊಡುಗೆಗೂ ಮುನ್ನ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಟಿ.ಎಸ್‌.ಸುಬ್ರಮಣ್ಯ, ವಿ.ಏಡುಕುಂಡಲ, ಡಿ.ರಂದೀಪ್‌, ಎಂ.ಕೆ.ಸೋಮಶೇಖರ್‌, ನಾಗರಾಜು ಇದ್ದಾರೆ   

ಮೈಸೂರು: ದಸರಾ ಮೆರವಣಿಗೆಗಾಗಿ ಒಂದೂವರೆ ತಿಂಗಳಿನಿಂದ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಆನೆಗಳು ಅರಣ್ಯ ಇಲಾಖೆ ಅಧಿಕಾರಿಗಳ ಬೆಂಗಾವಲಿನಲ್ಲಿ ಮಂಗಳವಾರ ತಮ್ಮ ಶಿಬಿರಗಳಿಗೆ ತೆರಳಿದವು.

ಈ ಬಾರಿ 35 ಮಾವುತರು, ಕಾವಾಡಿಗರು ಹಾಗೂ 20 ಸಹಾಯಕರಿಗೆ ಅರಮನೆ ಮಂಡಳಿ ಹಾಗೂ ಅರಣ್ಯ ಇಲಾಖೆ ಪ್ರತ್ಯೇಕವಾಗಿ ಗೌರವಧನ ನೀಡಿದವು. ಕಳೆದ ಬಾರಿ ಅರಮನೆ ಮಂಡಳಿ ವತಿಯಿಂದ ಮಾತ್ರ ವಿತರಿಸಲಾಗಿತ್ತು.

ಅರಮನೆ ಮಂಡಳಿ ವತಿಯಿಂದ ತಲಾ ₹ 7,500 ಗೌರವಧನ ನೀಡಲಾಯಿತು. ಸಹಾಯಕರಿಗೆ ತಲಾ ₹ 5,000 ವಿತರಿಸಲಾಯಿತು. ಅರಣ್ಯ ಇಲಾಖೆ ವತಿಯಿಂದ ಕ್ರಮವಾಗಿ ₹ 3,000 ಹಾಗೂ ₹ 2,000 ನೀಡಲಾಯಿತು.

ADVERTISEMENT

ಸಂಸದ ಪ್ರತಾಪಸಿಂಹ, ಡಿಸಿಎಫ್‌ (ವನ್ಯಜೀವಿ) ವಿ.ಏಡುಕುಂಡಲ, ಆನೆವೈದ್ಯ ನಾಗರಾಜು, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಮಣ್ಯ ಇದ್ದರು.
ಚೇತರಿಸಿಕೊಳ್ಳುತ್ತಿರುವ ಚಿನ್ನಪ್ಪ: ಜಂಬೂಸವಾರಿ ದಿನದಂದು ಪ್ರಶಾಂತ ಆನೆಯಿಂದ ಕೆಳಗೆ ಬಿದ್ದು ಎಡಗೈಗೆ ಪೆಟ್ಟು ಮಾಡಿಕೊಂಡಿರುವ ಮಾವುತ ಜೆ.ಆರ್‌.ಚಿನ್ನಪ್ಪ ಚೇತರಿಸಿಕೊಳ್ಳುತ್ತಿದ್ದಾರೆ.‌ ಅವರ ಕೈಗೆ ಬ್ಯಾಂಡೇಜ್‌ ಹಾಕಲಾಗಿದೆ.

‘ಅಂದು ಕಣ್ಣುಗಳು ಮಂಜಾದವು. ತಲೆತಿರುಗಿ ಕೆಳಗೆ ಬಿದ್ದೆ. 18 ವರ್ಷಗಳಿಂದ ಆನೆ ಕೆಲಸದಲ್ಲಿ ತೊಡಗಿದ್ದೇನೆ. ಆದರೆ, ಯಾವತ್ತೂ ಈ ರೀತಿ ಆಗಿರಲಿಲ್ಲ. ಹಿಂದಿನ ರಾತ್ರಿ ಸರಿಯಾಗಿ ನಿದ್ದೆ ಮಾಡಿರದ ಕಾರಣ ಹೀಗಾಗಿರಬಹುದು’ ಎಂದು ಚಿನ್ನಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.