ADVERTISEMENT

ಮುಂದುವರಿದ ಮುಸಲಧಾರೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 7:54 IST
Last Updated 4 ಜೂನ್ 2013, 7:54 IST

ಮೈಸೂರು: ಮಳೆ ಸೋಮವಾರವೂ ಮುಂದುವರೆದಿದೆ. ಮೈಸೂರು ನಗರ, ತಿ.ನರಸೀಪುರ ಮತ್ತು ನಂಜನಗೂಡಿನಲ್ಲಿ ಅತಿ ಹೆಚ್ಚು (5 ಮಿ.ಮೀ) ಮಳೆಯಾದರೆ, ಕೆ.ಆರ್.ನಗರದಲ್ಲಿ ಅತಿ ಕಡಿಮೆ (0.5 ಮಿ.ಮೀ) ಮಳೆಯಾಗಿರುವ ಬಗ್ಗೆ ದಾಖಲಾಗಿದೆ.

ಉಳಿದಂತೆ ಹಂಪಾಪುರದಲ್ಲಿ 2.5 ಮಿ.ಮೀ., ಪಿರಿಯಾಪಟ್ಟಣದಲ್ಲಿ 2.5 ಮಿ.ಮೀ., ಮಾರ್ಬಳ್ಳಿಯಲ್ಲಿ 1.5 ಮಿ.ಮೀ., ಹುಣಸೂರು ತಾಲ್ಲೂಕಿನಲ್ಲಿ 1 ಮಿ.ಮೀ. ಮಳೆಯಾಗಿದೆ.

ನಗರದಲ್ಲಿ ಬೆಳಿಗ್ಗೆ 11.30 ಕ್ಕೆ ಮಳೆ ಆರಂಭವಾಯಿತು. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಮಳೆಗೆ ಸಿಲುಕಿದರು. ಮಳೆಯಿಂದ ಯಾವುದೇ ಅನಾಹುತ ಆಗಿರುವ ಬಗ್ಗೆ ವರದಿಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.