ಮೈಸೂರು: `ಮುಡಾ~ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಲ್ಲೂ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಾಕೀತು ಮಾಡಿದರು.
ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ 3.30 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಒಳಚರಂಡಿ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿದರು.
ಗುತ್ತಿಗೆದಾರರು ಜವಾಬ್ದಾರಿಯಿಂದ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು. ಗುಣಮಟ್ಟ ಕಾಯ್ದು ಕೊಳ್ಳಬೇಕು. ಇಲ್ಲದಿದ್ದರೆ ಜನ ಕಾಮಗಾರಿ ಬಗ್ಗೆ ತಮ್ಮ ಗಮನಕ್ಕೆ ತರಬೇಕು. ಕೂರ್ಗಳ್ಳಿ ಮತ್ತು ಸಾಹುಕಾರ್‌ಹುಂಡಿ ಗ್ರಾಮಗಳಲ್ಲಿ ಕೂಡಲೇ ಒಳಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಪಿ. ಚಂದ್ರೇಶ್, ಮುಡಾ ಅಧ್ಯಕ್ಷ ನಾಗೇಂದ್ರ, ಶಾಸಕ ಎಂ.ಸತ್ಯನಾರಾಯಣ ಮಾತ ನಾಡಿದರು. ಗ್ರಾ.ಪಂ. ಅಧ್ಯಕ್ಷ ಶಿವಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮರೀಗೌಡ, ಸದಸ್ಯರಾದ ಮಹದೇವ, ಸಿದ್ದೇಗೌಡ, ಭಾಗ್ಯ, ತಾ.ಪಂ. ಸದಸ್ಯರಾದ ಗೋವಿಂದ ಸ್ವಾಮಿ, ಧನಲಕ್ಷ್ಮಿ, ಎಚ್.ಟಿ. ರವಿಕುಮಾರ್, ನರೇಂದ್ರ, ಮೊಬೈಲ್ ರಮೇಶ್, ಹಿನಕಲ್ ಪ್ರಕಾಶ್, ಭಾಗ್ಯ ಶಿವಮೂರ್ತಿ, ನೇತ್ರಾವತಿ, ಗೀತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.