ADVERTISEMENT

ರಂಗಾಯಣದ ಚಿಣ್ಣರಿಗೆ ಹಬ್ಬಗಳ ವಿಶೇಷತೆ ಪಾಠ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 6:33 IST
Last Updated 24 ಏಪ್ರಿಲ್ 2013, 6:33 IST

ಮೈಸೂರು: ಹಾಡು-ಕುಣಿತ, ಸಂತೆ ಹೀಗೆ ಒಂದಿಲ್ಲೊಂದು ಆಟಗಳಲ್ಲಿ ತೊಡ ಗಿಸಿಕೊಂಡಿದ್ದ ರಂಗಾಯಣದ ಚಿಣ್ಣರ ಮೇಳದ ಮಕ್ಕಳಿಗೆ ಮಂಗಳವಾರ ಹಿಂದೂ ಹಬ್ಬಗಳ ವಿಶೇಷಗಳ ಬಗ್ಗೆ ತಿಳಿಸಿಕೊಡಲಾಯಿತು.

ನಾಡಿನ ದೇವಾಲಯಗಳ ಬಗ್ಗೆ ಸಂಶೋಧನೆ ನಡೆಸಿರುವ ದೀಪಿಕಾ ಅವರು ಹಬ್ಬಗಳ ವಿಶೇಷತೆಯನ್ನು ಮಕ್ಕಳ ಭಾಷೆಯಲ್ಲಿಯೇ ಹೇಳಿಕೊ ಟ್ಟರು. ಮಧ್ಯಾಹ್ನದ ಸುಡು ಬಿಸಿಲನ್ನು ಲೆಕ್ಕಿಸದೆ ರಂಗಾಯಣದ ವನರಂಗದಲ್ಲಿ ಜಮಾಯಿಸಿದ್ದ ಮಕ್ಕಳು ಉತ್ಸಾಹ ದಿಂದಲೇ ಹಬ್ಬಗಳ ಬಗ್ಗೆ ಪ್ರಶ್ನೆಗಳನ್ನು ಹಾಕಿ ಸಂದೇಹ ಪರಿಹರಿಸಿಕೊಂಡರು.

ಹಿಂದೂ ಪಂಚಾಂಗದಲ್ಲಿ ಯುಗಾದಿ ಹಬ್ಬವನ್ನು ಹೊಸ ಸಂವತ್ಸರವೆಂದು ಕರೆಯಲಾಗುತ್ತದೆ. ಹೊಸ ಬಟ್ಟೆ ಧರಿಸಿ ಬೇವು-ಬೆಲ್ಲ ತಿಂದು ಹಬ್ಬವನ್ನು ಆಚರಿಸುವುದು ವಾಡಿಕೆ. ಕಷ್ಟ-ಸುಖ ಗಳನ್ನು ಜೀವನದಲ್ಲಿ ಸಮನಾಗಿ ಸ್ವೀಕರಿ ಸಬೇಕು ಎಂಬುದು ಇದರ ಉದ್ದೇಶ.

ಭಾದ್ರಪದ ಮಾಸದ ಶುದ್ಧ ತದಿಗೆ ಮೂರನೇ ದಿನ ಗೌರಿ ಹಬ್ಬ, ನಾಲ್ಕನೇ ದಿನ ಗಣೇಶ ಹಬ್ಬವನ್ನು ಆಚರಿಸಲಾ ಗುತ್ತದೆ. ಎಲ್ಲರ ಮನೆಯಲ್ಲೂ ಗಣೇಶ ಮೂರ್ತಿಯನ್ನು ಕೂರಿಸುತ್ತೀರಲ್ಲಾ? ಎಂಬ ಪ್ರಶ್ನೆಗೆ ಮಕ್ಕಳು ತಲೆದೂಗಿದರು. ಪರಿಸರಸ್ನೇಹಿ ಮಣ್ಣಿನ ಗಣೇಶನನ್ನೇ ಕೂರಿಸಬೇಕು. ಬಣ್ಣದ ಗಣೇಶನನ್ನು ತರಬೇಡಿ. ಇದರಿಂದ ಪರಿಸರ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು. ಇದಕ್ಕೆ ಮಕ್ಕಳು ಕೈ ಎತ್ತುವ ಮೂಲಕ ಒಪ್ಪಿಗೆ ಸೂಚಿಸಿದರು.

ಗಣೇಶ ಹಬ್ಬದಂದು ಚಂದ್ರನನ್ನು ಏಕೆ ನೋಡಬಾರದು ಎಂಬ ಪ್ರಶ್ನೆಗೆ ಬಹುತೇಕ ಮಕ್ಕಳಿಂದ ಉತ್ತರ ಬರಲಿಲ್ಲ. ಚಂದ್ರನಿಗೆ ಗಣೇಶ ಶಾಪ ನೀಡಿದ ಸಣ್ಣ ಕತೆಯನ್ನು ಹೇಳಿದರು. ನವರಾತ್ರಿ ಹಬ್ಬದ ಸಮಯದಲ್ಲಿ ಎಲ್ಲರ ಮನೆಯಲ್ಲಿ ಗೊಂಬೆಗಳನ್ನು ಕೂರಿಸಲಾಗುತ್ತದೆ. ನಾಡಹಬ್ಬವನ್ನು ಸಾಂಸ್ಕೃತಿಕ ನಗರಿಯಲ್ಲಿ ವಿಜೃಂಭಣೆ ಯಿಂದ ಆಚರಿಸಲಾಗುತ್ತದೆ.

ಕಳೆದ ಬಾರಿ ಅಂಬಾರಿ ಹೊತ್ತ ಆನೆ ಯಾವುದು ಎಂಬ ಪ್ರಶ್ನೆಗೆ ಮಕ್ಕಳು ಅರ್ಜುನ ಎಂದು ಏರುಧ್ವನಿಯಲ್ಲಿ ಉತ್ತರಿಸಿದರು. ನವರಾತ್ರಿಯ ಸಪ್ತಮಿ ದಿನದಂದು ಸರಸ್ವತಿ ಪೂಜೆ, 8ನೇ ದಿನ ದುರ್ಗಾಷ್ಟಮಿ ಪೂಜೆ, 9 ನೇ ದಿನ ಆಯುಧ ಪೂಜೆ ಮತ್ತು 10 ನೇ ದಿನದಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ ಎಂದು ನವರಾತ್ರಿ ವಿಶೇಷತೆಯನ್ನು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.