ADVERTISEMENT

ಸಹಪಠ್ಯ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 6:55 IST
Last Updated 8 ಮಾರ್ಚ್ 2011, 6:55 IST

ತಿ.ನರಸೀಪುರ: ನಿರಂತರ ಸಹ ಪಠ್ಯ ಚಟುವಟಿಕೆಗಳ ಕಾರ್ಯಕ್ರಮ ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಹೊರ ತರುವ ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಮಹಾದೇವಮ್ಮ ಹೇಳಿದರು. ತಾಲ್ಲೂಕಿನ ಹಿರಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಸೋಮ ವಾರ ನಡೆದ ತಿ.ನರಸೀಪುರ ಕ್ಲಸ್ಟರ್ ಮಟ್ಟದ ನಿರಂತರ ಸಹ ಪಠ್ಯ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಮಕ್ಕಳಲ್ಲಿ ಉತ್ತಮ ಪ್ರತಿಭೆ ಇದೆ. ಇಂದು ಅವರು ನೀಡಿದ ರೂಪಕಗಳಲ್ಲಿ ಅವರ ಹಾವ ಭಾವ ತನ್ಮಯತೆ ಅವರ ಪ್ರತಿಭೆಯನ್ನು ಎತ್ತಿ ತೋರುತ್ತದೆ. ಇಂತಹುದೇ ಪ್ರತಿಭೆ ಅವರ ಪಠ್ಯ ವಿಷಯಗಳು ಕಂಡು ಬಂದಲ್ಲಿ ಅವರು ಉತ್ತಮ ಪ್ರಜೆಗಳಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
,
ಹಿರಿಯೂರು ಶಾಲೆಯ ಮಕ್ಕಳು ಗ್ರಾಮೀಣ ಸೊಗಡಿನ ಧಾರ್ಮಿಕ ರೂಪಕ ಸಿದ್ಧಪ್ಪಾಜಿ ಪವಾಡ ಪ್ರದರ್ಶನ ನೀಡಿದರೆ, ಹೆಳವರಹುಂಡಿ ಶಾಲಾ ಮಕ್ಕಳು ಹಿಡಿಂಬಾವಧೆ, ಚೌಹಳ್ಳಿ ಶಾಲಾ ಮಕ್ಕಳು ಪುಣ್ಯಕೋಟಿ ರೂಪಕಗಳನ್ನು ಅದ್ಭುತವಾಗಿ ಮಾಡಿ ತೋರಿಸಿದರು. ಸಾಮೂಹಿಕ ನೃತ್ಯ ಪ್ರದರ್ಶನ ಕೂಡ ನಡೆಯಿತು. 9 ಶಾಲೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಕ್ಷೇತ್ರ ಸಂಪನ್ಮೂಲಾಧಿಕಾರಿ ನಾಗೇಂದ್ರಸಿಂಗ್, ದೈಹಿಕ ಶಿಕ್ಷಣ ತಾಲ್ಲೂಕು ಸಂಯೋಜಕ ಸಂಪತ್‌ದೊರೈರಾಜ್, ಎಸ್‌ಡಿ ಎಂಸಿ ಅಧ್ಯಕ್ಷ ಬಸವಣ್ಣ,  ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕ.ಪು. ಮಹಾದೇವಸ್ವಾಮಿ. ಸದಸ್ಯ ಮಹಾ ದೇವಣ್ಣ, ಶಿಕ್ಷಕರಾದ ರಾಮು, ಬಸವರಾಜು, ಎಲ್ಲಾ  ಕ್ಲಸ್ಟರ್ ಸಂಪನ್ಮೂಲ ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಶ್ವ ಕನ್ನಡ ತೇರಿಗೆ ಸ್ವಾಗತ ಮತ್ತು ಬೀಳ್ಕೊಡುಗೆ : ಬೆಳಗಾವಿ ಯಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗುತ್ತಿರುವ ವಿಶ್ವ  ಕನ್ನಡ ತೇರಿಗೆ ಭಾನುವಾರ ಪಟ್ಟಣದಲ್ಲಿ ಅದ್ದೂರಿ ಯಾಗಿ ಸ್ವಾಗತಿಸಲಾಯಿತು.

ನಂತರ ಪಟ್ಟಣದ ಶ್ರೀಗುಂಜಾನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ನಂತರ ನಂಜನಗೂಡಿಗೆ  ಬೀಳ್ಕೊಡಲಾಯಿತು.
 ತಹಶೀಲ್ದಾರ್ ವಿ,ಆರ್.ಶೈಲಜಾ, ತಾ.ಪಂ ಅಧ್ಯಕ್ಷೆ ಗಾಯಿತ್ರಿ ಸ್ವಾಮಿ ಗೌಡ, ಉಪಾಧ್ಯಕ್ಷ ಸಿ.ವೆಂಕಟೇಶ್, ಪಪಂ ಅಧ್ಯಕ್ಷ ಬಸವಣ್ಣ, ಉಪಾಧ್ಯಕ್ಷ ಟೆಂಪೋ ಮಹದೇವಣ್ಣ, ಬಿಇಓ ಮಹಾದೇವಮ್ಮ, ವಿ.ಟಿ.ವಿಲ್ಸನ್, ಬಿ.ಮರಯ್ಯ, ಸಿದ್ದಲಿಂಗಮೂರ್ತಿ, ತೋಟದಪ್ಪ ಬಸವರಾಜು, ನಂಜುಂಡಸ್ವಾಮಿ, ಕನ್ನಡ ಪರ ಸಂಘಟನೆಗಳ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.