ADVERTISEMENT

ಹುತಾತ್ಮರಿಗೆ ಗೌರವ ಸಮರ್ಪಣೆ

ಪೊಲೀಸರಿಂದ ವಾಲಿ ಫೈರಿಂಗ್, ಹಿರಿಯ ಅಧಿಕಾರಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 19:27 IST
Last Updated 21 ಅಕ್ಟೋಬರ್ 2018, 19:27 IST

ಮೈಸೂರು: ಇಲ್ಲಿನ ಹುತಾತ್ಮರ ಉದ್ಯಾನದಲ್ಲಿನ ಸ್ಮಾರಕವನ್ನು ಭಾನುವಾರ ಹೂಗಳಿಂದ ಸಿಂಗರಿಸಲಾಗಿತ್ತು. ಇಡೀ ಉದ್ಯಾನದಲ್ಲಿ ಪಕ್ಷಿಗಳ ಕಲರವ ಬಿಟ್ಟರೆ ಗಾಢವಾದ ಮೌನ ಆವರಿಸಿತ್ತು. ಈ ಮೌನದಲ್ಲಿ ಹುತಾತ್ಮ ಪೊಲೀಸರ ಸ್ಮಾರಕಕ್ಕೆ ಹೂಗುಚ್ಛಗಳನ್ನಿಟ್ಟು ಗೌರವ ಸೂಚಿಸಲಾಯಿತು.

ಜಿಲ್ಲಾ ಮತ್ತು ಪ್ರಧಾನ ಸೆಷೆನ್ಸ್ ನ್ಯಾಯಾಧೀಶ ಎಸ್‌.ಕೆ.ವಂಟಿಗೋಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೊಲೀಸರು ವಾಲಿ ಫೈರಿಂಗ್ ನಡೆಸುವ ಮೂಲಕ ಅಗಲಿದ ಪೊಲೀಸರಿಗೆ ಗೌರವ ವಂದನೆ ಸಲ್ಲಿಸಿದರು.

ರಾಜ್ಯದ ಹುತಾತ್ಮ ಪೊಲೀಸ್ ಅಧಿಕಾರಿಗಳಾದ ಬಾಳೇಗೌಡ, ಶಿವಸ್ವಾಮಿ, ರಮೇಶ್‌ಪರಮೇಶ್ವರ್‌ನಾಯಕ, ಕೆ.ವಿ.ಸೋಮಶೇಖರ್, ಪರಸಪ್ಪ ಕಾಸಪ್ಪ ಗೌಹಾರಿ, ಯಶವಂತಕುಮಾರ್, ವಿ.ಅಪ್ಪಾಜಿ, ಎ.ಟಿ.ನಾಗರಾಜು, ಎಂ.ಹನುಮಂತ, ಎಸ್‌.ಮಹಾಲಿಂಗಯ್ಯ, ಸುಭಾಷ್ ಮಲ್ಲನಗೌಡ ಪಾಟೀಲ, ಎಸ್‌.ಎ.ರವಿಶಂಕರ್, ಸಿದ್ದಪ್ಪ, ಮಾನಸಾ, ಮೃದುಲಾ ಆಹಾರ್ಯ ಸೇರಿದಂತೆ ದೇಶಾದ್ಯಂತ ಕರ್ತವ್ಯದ ವೇಳೆ ಹುತಾತ್ಮರಾದ 414 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹೆಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‍ಸಿಂಗ್ ಸ್ಮರಿಸಿದರು.

ADVERTISEMENT

ಪೊಲೀಸ್ ಕಮೀಷನರ್ ಡಾ.ಎ.ಸುಬ್ರಹಣ್ಯೇಶ್ವರರಾವ್, ಡಿಸಿಪಿ ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‍ಸಿಂಗ್, ಕೆಎಸ್‍ಆರ್‌ಪಿ ಕಮಾಂಡೆಂಟ್ ಕೃಷ್ಣಪ್ಪ, ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಫುಲ್‍ಕುಮಾರ್, ಉಪ ನಿರ್ದೇಶಕ ವಂಶಿಕೃಷ್ಣ, ಕೆಎಸ್‍ಆರ್‌ಪಿ 5ನೇ ಕಮಾಂಡೆಂಟ್ ಕೆ.ಎಸ್.ರಘುನಾಥ್, ರಾಜ್ಯ ಗುಪ್ತ ವಾರ್ತೆ ಅಧೀಕ್ಷಕಿ ಬಿ.ಟಿ.ಕವಿತಾ, ಸಹಾಯಕ ಪೊಲೀಸ್ ಆಯುಕ್ತ ಧರ್ಮಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಪಿ.ವಿ.ಸ್ನೇಹಾ ಹಾಗೂ ಇನ್ನಿತರರು ಪುಷ್ಪಗುಚ್ಛಗಳನ್ನಿಟ್ಟು ಹುತಾತ್ಮರಿಗೆ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.