ADVERTISEMENT

ಸವಿತಾ ಸಮಾಜದ ಕುಟುಂಬಕ್ಕೆ ಬಹಿಷ್ಕಾರ: ದೂರು

ಪರಿಶಿಷ್ಟ ಜಾತಿಯವರಿಗೆ ಕ್ಷೌರ ಮಾಡಿದ್ದಕ್ಕೆ ಶಿಕ್ಷೆ: ಆರೋಪ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 1:50 IST
Last Updated 20 ನವೆಂಬರ್ 2020, 1:50 IST

ನಂಜನಗೂಡು: ಪರಿಶಿಷ್ಟ ಜಾತಿಯವರ ಕ್ಷೌರ ಮಾಡಿದ್ದಕ್ಕಾಗಿ, ಸವಿತಾ ಸಮುದಾಯದ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನಲಾದ ಪ್ರಕರಣ ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ,ಸವಿತಾ ಸಮುದಾಯದಮಲ್ಲಿಕಾರ್ಜುನ ಶೆಟ್ಟಿ ಅವರು ತಹಶೀಲ್ದಾರ್‌ಗೆ ದೂರುನೀಡಿದ್ದಾರೆ.

‘ಗ್ರಾಮದಲ್ಲಿ ವಿವಿಧ ಸಮುದಾಯಗಳ ಜನವಾಸವಿದ್ದಾರೆ. ಅದರಲ್ಲಿ ನಾಯಕ ಸಮುದಾಯದ ಕೆಲವರು ಪರಿಶಿಷ್ಟ ಜಾತಿಯವರಿಗೆಕ್ಷೌರಮತ್ತು ಶೇವಿಂಗ್ ಮಾಡದಂತೆ ಕೆಲ ದಿನಗಳಿಂದ ಒತ್ತಡ ಹೇರುತ್ತಿದ್ದರು. ಹೀಗಾಗಿ, ಪೊಲೀಸರ ಬಳಿ ಹೋದೆ. ಅವರು ಹೇಳಿದಂತೆ, ಪರಿಶಿಷ್ಟರೂ ಸೇರಿದಂತೆ ಗ್ರಾಮದ ಎಲ್ಲಾ ಸಮುದಾಯದವರಿಗೂ ಕ್ಷೌರ ಮಾಡುವ ಕಾಯಕ ಮುಂದುವರಿಸಿದೆ. ಹೀಗಾಗಿ,ನಾಯಕ ಸಮುದಾಯದ ಕೆಲವರು ಸಭೆ ಸೇರಿ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಲ್ಲದೇ ದಂಡವನ್ನೂ ವಿಧಿಸಿದ್ದಾರೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ನಮ್ಮ ಕುಟುಂಬಕ್ಕೆಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಅವರು ಈ ದೂರುಸ್ವೀಕರಿಸಿಗ್ರಾಮಸ್ಥರೊಡನೆ ಮಾತುಕತೆ ನಡೆಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆನಮ್ಮಲ್ಲಿ ಯಾವುದೇದೂರುದಾಖಲಾಗಿಲ್ಲ.ವೈಯಕ್ತಿಕಭಿನ್ನಾಭಿಪ್ರಾಯಗಳಿಂದಈ ಪ್ರಕರಣ ನಡೆದಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆಗ್ರಾಮಕ್ಕೆ ತೆರಳಿ ಸಹಬಾಳ್ವೆಯಿಂದ ಬದುಕುವಂತೆ ಸಲಹೆ ನೀಡಿದ್ದೇವೆ’ ಎಂದು ನಂಜನಗೂಡುಸಿಪಿಐ ಲಕ್ಷ್ಮಿಕಾಂತ್‌ ತಲವಾರ್‌ ಹೇಳಿದರು.

ತಹಶೀಲ್ದಾರ್‌ ಮಹೇಶ್‌ ಕುಮಾರ್‌ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.