ADVERTISEMENT

ಮೈಸೂರು: ₹ 40 ಲಕ್ಷ ಮೌಲ್ಯದ ನಿವೇಶನ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 13:46 IST
Last Updated 6 ಆಗಸ್ಟ್ 2020, 13:46 IST
ಮುಡಾ ವಶಪಡಿಸಿಕೊಂಡ ಶೆಡ್‌
ಮುಡಾ ವಶಪಡಿಸಿಕೊಂಡ ಶೆಡ್‌   

ಮೈಸೂರು: ನಗರದ ಗೋಕುಲಂನ 2ನೇ ಹಂತದಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಿಸಿಕೊಂಡು ವಾಸವಿದ್ದ ಬಸವಣ್ಣ ಎಂಬುವವರಿಂದ, ₹40 ಲಕ್ಷ ಮೌಲ್ಯದ 6.40 x 9.40 ಮೀಟರ್ ಅಳತೆಯ ನಿವೇಶನವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿದೆ.

ವಲಯಾಧಿಕಾರಿ ಎಚ್.ಪಿ.ಶಿವಣ್ಣ, ಎಂಜಿನಿಯರ್‌ ನಾಗರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಅನಧಿಕೃತವಾಗಿ ವಶಪಡಿಸಿಕೊಂಡಿದ್ದ ನಿವೇಶನವನ್ನು 1974ರ ಕರ್ನಾಟಕ ಸಾರ್ವಜನಿಕ ಆವರಣ (ಅನಧಿಕೃತ ಅನುಭವದಾರರನ್ನು ಒಕ್ಕಲೆಬ್ಬಿಸುವುದು) ಕಾಯ್ದೆಯಡಿ ತೆರವುಗೊಳಿಸಿ, ಪ್ರಾಧಿಕಾರದ ವಶಕ್ಕೆ ಪಡೆದು ನಾಮಫಲಕ ಅಳವಡಿಸಲಾಯಿತು.

ಈ ನಿವೇಶನವನ್ನು ಹರಾಜಿಗೆ ಒಳಪಡಿಸಲು ನಿರ್ದೇಶಿಸಲಾಗಿರುತ್ತದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.