ಸಾಲಿಗ್ರಾಮ: ತಾಲ್ಲೂಕಿನ ಮಿರ್ಲೆ ಗ್ರಾಮದ ಪದವೀಧರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ 11 ಮಂದಿ ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘದ ಮಂಡಳಿಗೆ 13 ನಿರ್ದೇಶಕ ಸ್ಥಾನಗಳಿದ್ದು, 11 ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ನಿಗದಿತ ದಿನಾಂಕಕ್ಕೆ ನಾಮಪತ್ರ ಸಲ್ಲಿಸಿದ 11 ಮಂದಿಯನ್ನು ನಿರ್ದೇಶಕರು ಎಂದು ಘೋಷಣೆ ಮಾಡಿದ್ದಾರೆ.
ನೂತನ ನಿರ್ದೇಶಕರಾಗಿ ಎಂ.ಕೆ. ಸತೀಶ್, ಎಂ.ಎಂ.ಮಹದೇವ್, ಎಂ.ಎಸ್.ರಾಜು, ಎಂ.ವಿ.ರಮೇಶ್, ನರಸೀಹೇಗೌಡ ಎಂ.ಎಸ್, ಕೆ.ಸಿ.ನಾಗಭೂಷಣ, ಎಂ.ಜಿ.ಚಂದ್ರಶೇಖರ್, ಸೀಮಾ, ವಿ.ಎಸ್.ನಾಗರತ್ನಾ, ಕೆ.ವಿ.ವಿಜಯಕುಮಾರ್, ಎ. ಮನೀತ್‌ಕುಮಾರ್ ಅವಿರೋಧವಾಗಿ ಆಯ್ಕೆಯಾದವರು.
13 ಸ್ಥಾನಗಳ ಪೈಕಿ 11 ಮಂದಿ ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯಾಗಿದ್ದು, ಹಿಂದುಳಿದ ವರ್ಗಕ್ಕೆ ಸೇರಿದ 2 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದ ಕಾರಣಕ್ಕೆ ಖಾಲಿ ಉಳಿದಿವೆ.
ನೂತನ ನಿರ್ದೇಶಕರು ಬೆಂಬಲಿಗರು ಫಲಿತಾಂಶ ಘೋಷಣೆ ಬಳಿಕ ಸಿಹಿ ಹಂಚಿ ಸಂಭ್ರಮಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.