ADVERTISEMENT

ನಂಜನಗೂಡು: ನಗರದ ಅಭಿವೃದ್ಧಿಗೆ ₹13 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಮೇ 2025, 15:05 IST
Last Updated 13 ಮೇ 2025, 15:05 IST
ನಂಜನಗೂಡಿನ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು,ಆಯುಕ್ತ ವಿಜಯ್ ಇದ್ದಾರೆ.
ನಂಜನಗೂಡಿನ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು,ಆಯುಕ್ತ ವಿಜಯ್ ಇದ್ದಾರೆ.   

ನಂಜನಗೂಡು:  ಇಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 46 ವಿಷಯಗಳ ಬಗ್ಗೆ ಸದಸ್ಯರುಗಳು ನಿರ್ಣಯ ಕೈಗೊಂಡರು

ಅಧ್ಯಕ್ಷ ಶ್ರೀಕಂಠಸ್ವಾಮಿ, ಆಯುಕ್ತ ವಿಜಯ್ ಕುಮಾರ್‌ ಮಾತನಾಡಿ, ನಗರದ 31 ವಾರ್ಡ್‍ಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ತಲಾ ₹10 ಲಕ್ಷ ಅನುದಾನ ನೀಡಲು ತೀರ್ಮಾನಿಸಲಾಯಿತು. ಕಾಮಗಾರಿಗಳಿಗಾಗಿ ನಗರಸಭಾ ನಿಧಿಯಿಂದ ₹7.5 ಕೋಟಿ, 15ನೇ ಹಣಕಾಸು ನಿಧಿಯಿಂದ ₹3 ಕೋಟಿ, ಎಸ್‍ಎಫ್‍ಸಿ ನಿಧಿಯಿಂದ ₹50 ಲಕ್ಷ ಹಾಗೂ ಉಳಿಕೆ ಅನುದಾನದಿಂದ ₹1 ಕೋಟಿ ಸೇರಿದಂತೆ ₹13 ಕೋಟಿ  ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲು  ಸಭೆ  ಅನುಮೋದನೆ ನೀಡಿದೆ ಎಂದರು.

ಸದಸ್ಯ ಎಚ್.ಎಸ್.ಮಹದೇವಸ್ವಾಮಿ ಮಾತನಾಡಿ, ನಗರದ ನ್ಯಾಯಾಲಯ, ದೇವಿರಮ್ಮನಹಳ್ಳಿ ವೃತ್ತ, ಚಿಂತಾಮಣಿ ಗಣಪತಿ ಬಸ್ ಶೆಲ್ಟರ್  ಬಳಿ ಅನಧಿಕೃತವಾಗಿ ಹಾಲಿನ ಬೂತ್‌ಗಳು ನಿರ್ಮಾಣವಾಗಿವೆ, ನಗರಸಭೆಗೆ ಅರ್ಜಿ ಸಲ್ಲಿಸಿದ ದಾಖಲೆಯಿಲ್ಲ. ಈ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಸದಸ್ಯರಾದ ಸಿದ್ಧರಾಜು, ಖಾಲೀದ್ ಅಹಮ್ಮದ್  ಕಲಾಪದಲ್ಲಿ ಪ್ರತಿಭಟನೆ ನಡೆಸಿದರು.

ADVERTISEMENT

ಆಯುಕ್ತ  ಮಾತನಾಡಿ ಸಭೆಯಲ್ಲಿ ಅಧ್ಯಕ್ಷ ಶ್ರೀಕಂಠಸ್ವಾಮಿ , ಉಪಾಧ್ಯಕ್ಷೆ ರಿಹಾನ ಬಾನು ಹಾಗೂ ಸದಸ್ಯರು ಅಭಿವೃದ್ದಿ ಕಾಮಗಾರಿಗಳಿಗೆ ಒಪ್ಪಿಗೆ ನೀಡಿದ್ದು, ಟೆಂಡರ್  ಆರಂಭಿಸಲಾಗುವುದು , ಶಾಸಕ ದರ್ಶನ್ ಧ್ರುವನಾರಾಯಣ್‌ ಮಾರ್ಗದರ್ಶನದಂತೆ  ಯೋಜನೆಗಳಿಗೆ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದರು.

ನಗರದ ರಾಷ್ಟ್ರಪತಿ ರಸ್ತೆಯ ಭಾರ್ಗವಿ ಚಿತ್ರಮಂದಿರದ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಬಗ್ಗೆ ಮಾತನಾಡಿ, ಮೇಲ್ಸೇತುವೆ  ಬಗ್ಗೆ ರೈಲ್ವೆಯಿಂದ  ಮಾಹಿತಿ ಪಡೆದು , ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ನಗರದ ಆರ್.ಪಿ ಮತ್ತು ಎಂ.ಜಿ.ಎಸ್ ರಸ್ತೆಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಫಟ್‍ಪಾತ್ ತೆರವು ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

 ಸದಸ್ಯರಾದ ಮೀನಾಕ್ಷಿ, ವಿಜಯ್ ಕುಮಾರ್, ಮಂಗಳಮ್ಮ, ಮಹದೇವಪ್ರಸಾದ್, ಕಪಿಲೇಶ್, ಗಂಗಾಧರ್, ಮಹೇಶ್, ಯೋಗೇಶ್, ಶ್ವೇತಲಕ್ಷ್ಮಿ, ಸಿದ್ದಿಖ್, ಪ್ರದೀಪ್, ನಗರಸಭೆ ವ್ಯವಸ್ಥಾಪಕ ಹೇಮಕುಮಾರ್, ಪರಿಸರ ಎಂಜಿನಿಯರ್‌ ಮೈತ್ರಾದೇವಿ, ಕಂದಾಯ ಅಧಿಕಾರಿ ಜೆಸ್‍ಪಾಲ್‍ಸಿಂಗ್, ಎಇಇ ಶಮಂತ್, ಪ್ರೀತಂ, ಮಹೇಶ್, ನಂದಿನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.