ಮೈಸೂರು: ಕರ್ನಾಟಕದ ಆಟಗಾರ ಜಿ. ಪಳನಿ ಇಲ್ಲಿನ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಭಾನುವಾರ ಆರಂಭಗೊಂಡ ಶ್ರವಣದೋಷವುಳ್ಳವರ 25ನೇ ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌ನ ಮೊದಲ ದಿನದಂದು ಶುಭಾರಂಭ ಮಾಡಿದರು.
ಮುಕ್ತ ವಿಭಾಗದ ಮೊದಲ ಸುತ್ತಿನಲ್ಲಿ ಟೂರ್ನಿಯ 2ನೇ ಶ್ರೇಯಾಂಕಿತ ಜಿ. ಪಳನಿ, ಮುಜಿಬ್ ರೆಹಮಾನ್ ವಿರುದ್ಧ ಗೆಲುವು ಸಾಧಿಸಿದರು. ಆದರೆ, ಅಗ್ರ ಶ್ರೇಯಾಂಕದ ಆಟಗಾರ ತಮಿಳುನಾಡಿನ ಸ್ಪೆನ್ಸರ್ ಅಲೆಗ್ಸಾಂಡರ್ ಗಿಲ್ಬರ್ಟ್, ಮಿತೇಶ್‌ಬಾಯ್ ಪಟೇಲ್ ಎದುರು ಮಣಿದರು. 3ನೇ ಶ್ರೇಯಾಂಕದ, ಮಹಾರಾಷ್ಟ್ರದ ದೇವೇಂದ್ರ ಶ್ರೀಹರಿ ವೈದ್ಯ, ನಜಿನಿನ್ ರಫಿ ವಿರುದ್ಧ ಜಯ ಗಳಿಸಿದರು.
ಟೂರ್ನಿಯಲ್ಲಿ ವಿವಿಧ ರಾಜ್ಯಗಳ 180 ಆಟಗಾರರು ಪಾಲ್ಗೊಂಡಿದ್ದಾರೆ. 18 ವರ್ಷದ ಒಳಗಿನ ಬಾಲಕ–ಬಾಲಕಿಯರು ಹಾಗೂ ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.