ADVERTISEMENT

6 ತಿಂಗಳಲ್ಲಿ 500 ಜನೌಷಧಿ ಕೇಂದ್ರ: ಡಾ.ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 20:39 IST
Last Updated 7 ಮಾರ್ಚ್ 2022, 20:39 IST
ಸುಧಾಕರ್‌
ಸುಧಾಕರ್‌   

ಮೈಸೂರು: ‘ರಾಜ್ಯದಲ್ಲಿ ಇದೀಗ 952 ಜನೌಷಧಿ ಕೇಂದ್ರಗಳಿವೆ. ಮುಂದಿನ 6 ತಿಂಗಳಲ್ಲಿ ಹೊಸದಾಗಿ 500 ಕೇಂದ್ರ ಆರಂಭಿಸಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸೋಮವಾರ ಇಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಆರೋಗ್ಯ ಕೇಂದ್ರಗಳಲ್ಲೂ ಜನೌಷಧಿ ಕೇಂದ್ರ ತೆರೆಯುವ ಆಲೋಚನೆಯಿದೆ. ಔಷಧಿ ಬಗ್ಗೆ ಅಪನಂಬಿಕೆ ಬೇಡ. ಗುಣಮಟ್ಟದ ಔಷಧಿಗಳು ಕಡಿಮೆ ದರಕ್ಕೆ ಸಿಗಲಿವೆ’ ಎಂದರು.

‘ದೇಶದಲ್ಲಿ ನಾವು 3ನೇ ಸ್ಥಾನದಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನೌಷಧಿ ಕೇಂದ್ರ ಆರಂಭಿಸಿ, ಬಡವರು, ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಗೆ ಔಷಧಿ ಪೂರೈಸಿ ಮೊದಲ ಸ್ಥಾನಕ್ಕೆ ಬರುವ ಗುರಿ ಹೊಂದಿದ್ದೇವೆ ಎಂದರು. .

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.