ADVERTISEMENT

ಕೆ.ಆರ್.ನಗರ: ಮಹಿಳೆ ಹೊಟ್ಟೆಯಲ್ಲಿತ್ತು 5 ಕೆ.ಜಿ ಗೆಡ್ಡೆ!

ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರ ತಂಡದಿಂದ ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 6 ಮೇ 2022, 5:33 IST
Last Updated 6 ಮೇ 2022, 5:33 IST
ಕೆ.ಆರ್.ನಗರ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿ ವಾಣಿಶ್ರೀಯೊಂದಿಗೆ ಪ್ರಸೂತಿ ತಜ್ಞರಾದ ಡಾ.ಕೆ.ಆರ್.ಚಂದ್ರಕಲಾ, ಡಾ.ಎಸ್.ವೈ.ಭವಾನಿ, ಲಕ್ಷ್ಮಮ್ಮ ಇದ್ದಾರೆ
ಕೆ.ಆರ್.ನಗರ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿ ವಾಣಿಶ್ರೀಯೊಂದಿಗೆ ಪ್ರಸೂತಿ ತಜ್ಞರಾದ ಡಾ.ಕೆ.ಆರ್.ಚಂದ್ರಕಲಾ, ಡಾ.ಎಸ್.ವೈ.ಭವಾನಿ, ಲಕ್ಷ್ಮಮ್ಮ ಇದ್ದಾರೆ   

ಕೆ.ಆರ್.ನಗರ: ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ತಜ್ಞರ ತಂಡ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಐದು ಕೆ.ಜಿ ತೂಕದ ಅಂಡಾಶಯ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಯಶಸ್ವಿಯಾಗಿದೆ.

ದೊಡ್ಡ ಆಸ್ಪತ್ರೆಗಳಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಆದರೆ, ತಾಲ್ಲೂಕು ಮಟ್ಟದಲ್ಲಿ ಮಾಡಿರುವುದು ಕಡಿಮೆ. ಮುಖ್ಯ ವೈದ್ಯಾಧಿಕಾರಿ ಡಾ.ಎಂ.ಎಸ್.ನಾಗೇಂದ್ರ ಅವರ ನೇತೃತ್ವದಲ್ಲಿ ಪ್ರಸೂತಿ ತಜ್ಞರಾದ ಡಾ.ಕೆ.ಆರ್.ಚಂದ್ರಕಲಾ, ಡಾ.ಎಸ್.ವೈ.ಭವಾನಿ, ಡಾ.ದಿವ್ಯಾ ಮತ್ತು ಅರಿವಳಿಕೆ ತಜ್ಞರ ತಂಡ ಶಸ್ತ್ರಚಿಕಿತ್ಸೆ ಮೂಲಕ ಗೆಡ್ಡೆ ತೆಗೆದು ಯಶಸ್ವಿಯಾಗಿದೆ.

‘ರಾಜೀವ್ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯಾಗಿದ್ದೇನೆ. ಈಚೆಗೆ ಬೈಕ್‌ನಲ್ಲಿ ಬಿದ್ದು ಚಿಕಿತ್ಸೆಗಾಗಿ ಪಿರಿಯಾಪಟ್ಟಣದ ಆಸ್ಪತ್ರೆಗೆ ತೆರಳಿದ್ದೆ. ಅಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ಪತ್ತೆಯಾಯಿತು. ಇಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಗೆಡ್ಡೆ ತೆಗೆದಿದ್ದಾರೆ. ನನ್ನ ಹೊಟ್ಟೆ ದಪ್ಪ ಆಗುತ್ತಿರುವುದು ಗಮನಿಸಿದ್ದೆ. ಆದರೆ, ಗೆಡ್ಡೆ ಇರುವುದು ತಿಳಿದಿರಲಿಲ್ಲ’ ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತೂರು ಗ್ರಾಮದ ವಾಣಿಶ್ರೀ (46) ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.