ADVERTISEMENT

62.6 ಕೋಟಿ ಮಂದಿಗೆ ಶೌಚಾಲಯವಿಲ್ಲ!

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 7:02 IST
Last Updated 7 ಡಿಸೆಂಬರ್ 2012, 7:02 IST

ಮೈಸೂರು: ದೇಶದಲ್ಲಿ 92.9 ಕೋಟಿ ಜನರ ಬಳಿ ಮೊಬೈಲ್ ಇದೆ. ಆದರೆ, 62.6 ಕೋಟಿ ಜನರಿಗೆ ಶೌಚಾಲಯವಿಲ್ಲ ಎಂದು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಹಿರಿಯ ವಿಜ್ಞಾನಿ ಡಾ.ರಾಧಾಕೃಷ್ಣ ಹೇಳಿದರು.

ಮೈಸೂರು ಮಹಾನಗರ ಪಾಲಿಕೆ ಯಲ್ಲಿ ಜಿಲ್ಲಾ ಪಂಚಾಯಿತಿ ಸಹಭಾಗಿತ್ವ ದಲ್ಲಿ ಬುಧವಾರ ಏರ್ಪಡಿಸಿದ್ದ `ಘನತ್ಯಾಜ್ಯ ನಿರ್ವಹಣೆಯ ಸುಲಭ ವ್ಯವಸ್ಥೆ' ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

`ಯೂನಿಸೆಫ್ ಪ್ರಕಾರ ಜಗತ್ತಿನ 1/7ನೇ ಭಾಗದಷ್ಟು ಜನಸಂಖ್ಯೆ ಶೌಚಾ ಲಯವಿಲ್ಲದೇ ಬಯಲು ಪ್ರದೇಶಗಳನ್ನು ಉಪಯೋಗಿಸುತ್ತಿದ್ದಾರೆ. ಬಯಲು ಪ್ರದೇಶದಲ್ಲಿ ಬಹಿರ್ದೆಸೆ ಮಾಡು ವುದರಿಂದ ಮಾಲಿನ್ಯ ಹೆಚ್ಚಾಗುತ್ತದೆ. ಇದರಿಂದ ರೋಗಗಳೂ ಹರಡುತ್ತವೆ. ಆದ್ದರಿಂದ ಶೌಚಾಲಯ ಮೊದಲ ಆದ್ಯತೆ ಆಗಬೇಕು. ಭಾರತೀಯ ಸೈನಿಕರಿಗಾಗಿ ಲಡಾಕ್ ಪ್ರದೇಶದಲ್ಲಿ ಪರಿಸರಸ್ನೇಹಿ ಬಯೋಡೈಜೆಸ್ಟರ್ ಶೌಚಾಲಯ ನಿರ್ಮಾಣ ಮಾಡಲಾಗಿದೆ' ಎಂದು ಹೇಳಿದರು.

ಪಾಲಿಕೆ ಆಯುಕ್ತ ಎಂ.ಆರ್.ರವಿ, ಆರೋಗ್ಯಾಧಿಕಾರಿ ಡಾ.ನಾಗರಾಜ್, ಮೇಯರ್ ಎಂ.ಸಿ.ರಾಜೇಶ್ವರಿ, ಉಪ ಮೇಯರ್ ಮಹದೇವಪ್ಪ, ಪಾಲಿಕೆ ಸದಸ್ಯರು, ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.