ADVERTISEMENT

₹98 ಲಕ್ಷ ವಂಚನೆ: ದೂರು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 5:05 IST
Last Updated 25 ಫೆಬ್ರುವರಿ 2026, 5:05 IST
<div class="paragraphs"><p>ವಂಚನೆ</p></div>

ವಂಚನೆ

   

ಮೈಸೂರು: ‘₹ 98 ಲಕ್ಷ ವಂಚನೆ ಮಾಡಿದ್ದಾರೆ’ ಎಂದು ಆರೋಪಿಸಿ ಪಿ.ಎಂ.ಜಗದೀಶ್ ಅವರು ನಗರದ ಶಿವಕುಮಾರ್, ಮಧು, ಬೆಂಗಳೂರಿನ ಇಕ್ಬಾಲ್, ಮಂಗಳೂರಿನ ರಫೀಕ್ ಹಾಗೂ ಚೆನ್ನೈ ಮೂಲದ ಹಂಜಾ ಪಿಲ್ಯಾಲಾಲ್ ವಿರುದ್ಧ ನಜರ್‌ಬಾದ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

‘ಶಿವಕುಮಾರ್‌ ಮತ್ತು ತಂಡ ನಮ್ಮ ಬಳಿ ರೈಸ್ ಪುಲ್ಲಿಂಗ್ ಆರ್ಟಿಕಲ್ ಇದ್ದು, ಅದನ್ನು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿ ಹಣ ಹಂಚಿಕೊಳ್ಳಬಹುದು ಎಂದು ನಂಬಿಸಿದ್ದರು. ಚೆನ್ನೈನ ಕಂಪನಿಯೊಂದು ಅದನ್ನು ಖರೀದಿಸಲು ಬಂದಿದೆ, ಮಾರಾಟಕ್ಕೆ ಆರಂಭದಲ್ಲಿ ಖರ್ಚಿಗೆ ಹಣ ಬೇಕು ಎಂದು ನನ್ನಿಂದ ಹಣ ಪಡೆದು ವಂಚಿಸಿದ್ದಾರೆ’ ಎಂದು ಜಗದೀಶ್‌ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.