ADVERTISEMENT

ನಂಜನಗೂಡು: ನಾಲೆಗೆ ಬಿದ್ದು ದಂಪತಿ ಸಾವು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 13:46 IST
Last Updated 20 ಅಕ್ಟೋಬರ್ 2023, 13:46 IST
ಬೇಬಿ, ಶಂಕರ್ 
ಬೇಬಿ, ಶಂಕರ್     

ನಂಜನಗೂಡು: ತಾಲ್ಲೂಕಿನ ಹರತಲೆ ಬಳಿ ಕಬಿನಿ ಬಲದಂಡೆ ನಾಲೆಯಲ್ಲಿ ಬಟ್ಟೆ ಒಗೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ದಂಪತಿ ಮೃತಪಟ್ಟಿದ್ದಾರೆ.

ಹುಸ್ಕೂರಿನ ಶಂಕರ್ (30) ಹಾಗೂ ಪತ್ನಿ ಬೇಬಿ (26) ಮೃತರು. ಇವರಿಗೆ ಐದು ವರ್ಷದ ಗಂಡು ಮಗುವಿದೆ.

ಬಟ್ಟೆ ತೊಳೆಯುವಾಗ ಕಾಲು ಜಾರಿ ಬಿದ್ದ ಬೇಬಿಯನ್ನು ಪತಿ ಶಂಕರ್, ರಕ್ಷಿಸಲು ಹೋಗಿ ಅವರೂ ನೀರಿನಲ್ಲಿ ಮುಳುಗಿದರು. ನೀರಿನ ರಭಸಕ್ಕೆ ಇಬ್ಬರು ಕೊಚ್ಚಿಕೊಂಡು ಹೋದರು.

ADVERTISEMENT

ಕಳಲೆ ಬಳಿ ಗುರುವಾರ ದಂಪತಿ ಮೃತದೇಹ ಪತ್ತೆಯಾಗಿವೆ. ನುರಿತ ಈಜುಗಾರರ ಸಹಾಯದಿಂದ ಶವಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.