ADVERTISEMENT

ಸಾಲಕ್ಕೆ ಹೆದರಿ ಕಾಲುವೆಗೆ ಬಿದ್ದು ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2023, 14:02 IST
Last Updated 5 ಸೆಪ್ಟೆಂಬರ್ 2023, 14:02 IST
ಹನುಮೇಗೌಡ
ಹನುಮೇಗೌಡ    

ಬೆಟ್ಟದಪುರ: ಸಮೀಪದ ಚಿಕ್ಕನೇರಳೆ ಗ್ರಾಮದ ರೈತ ಹನುಮೇಗೌಡ(50) ಸಾಲಕ್ಕೆ ಹೆದರಿ ಕರಡಿಲಕ್ಕನಕೆರೆ ಏತ ನೀರಾವರಿ ಕಾಲುವೆಗೆ ಬಿದ್ದು ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರಿಗಿದ್ದ 3.15 ಗುಂಟೆ ಜಮೀನಿನಲ್ಲಿ ತಂಬಾಕು, ಹುರುಳಿ, ರಾಗಿ ಬೆಳೆಯನ್ನು ಬೆಳೆದಿದ್ದರು. ಬೇಸಾಯ ಮಾಡಲೆಂದು ಕಳೆದ 4 ವರ್ಷದ ಹಿಂದೆ ಪಿರಿಯಾಪಟ್ಟಣ ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ₹ 5 ಲಕ್ಷ ಕೃಷಿ ಸಾಲ ಪಡೆದಿದ್ದರು. ಈ ಬಾರಿ ತಂಬಾಕು ಬೆಳೆ ಬೇಸಾಯಕ್ಕಾಗಿ ವಿವಿಧ ಫೈನಾನ್ಸ್ ಗಳಲ್ಲಿ ಸಾಲ ಮಾಡಿದ್ದರು. ಸೂಕ್ತ ಸಂದರ್ಭದಲ್ಲಿ ಮಳೆಯಾದ ಕಾರಣ  ಬೆಳೆ ನಷ್ಟ ಉಂಟಾಗುತ್ತದೆ ಎಂದು ಮನನೊಂದು ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಗೀತಾ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಕಾಲುವೆಯಿಂದ ಶವವನ್ನು ಹೊರೆ ತೆಗೆದು ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಶವವನ್ನು ಹಸ್ತಾಂತರಿಸಲಾಗಿದೆ.

ADVERTISEMENT

ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.