ADVERTISEMENT

ದೀಪಾವಳಿಗೆ ಸಗಣಿಯ ದೀಪ

ಪ್ರಗತಿ ಪ್ರತಿಷ್ಠಾನದ ಸ್ವಯಂಸೇವಕರ ವಿನೂತನ ಸಾಧನೆ

ಕೆ.ಎಸ್.ಗಿರೀಶ್
Published 16 ನವೆಂಬರ್ 2020, 4:42 IST
Last Updated 16 ನವೆಂಬರ್ 2020, 4:42 IST
ಸಗಣಿಯ ಸಾಲುದೀಪಗಳು
ಸಗಣಿಯ ಸಾಲುದೀಪಗಳು   

ಮೈಸೂರು: ‘ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ ಸುಟ್ಟರೇ ನೊಸಲಿಗೆ ವಿಭೂತಿಯಾದೆ...’ ಎಂಬ ಹಾಡಿನ ಸಾಲಿ
ನಂತೆ ಸಗಣಿಯ ಮತ್ತೊಂದು ರೂಪವನ್ನು ವಿದ್ಯಾರಣ್ಯಪುಂನ ಪ್ರಗತಿ ಪ್ರತಿಷ್ಠಾನದ ಸ್ವಯಂಸೇವಕರು ಕಂಡುಕೊಂಡಿದ್ದಾರೆ.

ಈ ಸಗಣಿಯನ್ನೇ ದೀಪ ಮಾಡಲು ಬಳಸಿ, ಯಶಸ್ಸು ಕಂಡಿದ್ದಾರೆ. ಇಲ್ಲಿಯವರೆಗೆ 5 ಸಾವಿರದಷ್ಟು ದೀಪಗಳನ್ನು ತಯಾರಿಸಲಾಗಿದೆ.

ಸಗಣಿ, ಗೋಮೂತ್ರವನ್ನು ಮಿಶ್ರ ಮಾಡಿ ಇದಕ್ಕೆ ಸ್ಪಲ್ಪ ಹಾಲು, ಮೊಸರು, ತುಪ್ಪವನ್ನು ಸೇರಿಸಿ ಪಿಂಗಾಣಿ ದೀಪಗಳನ್ನೂ ನಾಚಿಸುವಂತಹ ದೀಪಗಳನ್ನು ಪ್ರತಿಷ್ಠಾನದ 20 ಮಂದಿ ಸ್ವಯಂಸೇವಕರು ತಯಾರಿಸಿದ್ದಾರೆ. 13 ದಿನಗಳಲ್ಲಿ ಇವರು ಮಾಡಿದ್ದು ಬರೋಬರಿ 5 ಸಾವಿರ ದೀಪಗಳನ್ನು. ಇದರಲ್ಲಿ 3 ಸಾವಿರಷ್ಟು ದೇವರಾಜ ಮಾರುಕಟ್ಟೆಯ ಬಳಿ ಸಾರ್ವಜನಿಕರಿಗೆ ಉಚಿತವಾಗಿ ಹಂಚಿ
ದರೆ, ಇನ್ನುಳಿದವುಗಳನ್ನು ಪ್ರಗತಿ ಸ್ವದೇಶಿ ಬಜಾರ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ. ಒಂದು ಜೊತೆ ದೀಪದ ಬೆಲೆ ₹ 15 ಎಂದು ನಿಗದಿಪಡಿಸಲಾಗಿದೆ.

ADVERTISEMENT

2013ರಲ್ಲಿ ಆರಂಭವಾದ ಈ ಪ್ರತಿಷ್ಠಾನವು ಪರಿಸರ ಸಂರಕ್ಷಣೆ, ಪ್ರಾಣಿ, ಪಕ್ಷಿಗಳ ರಕ್ಷಣೆಯಲ್ಲಿ ಸದ್ದಿಲ್ಲದೇ ತೊಡಗಿಕೊಂಡಿದೆ. ಪ್ಲಾಸ್ಟಿಕ್‌ ದೀಪಗಳನ್ನು ಬಳಸುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಅರಿತು, ಮಣ್ಣಿನ ದೀಪಗಳನ್ನು ನೀಡಲಾಯಿತು. ಈಗ ಸಗಣಿ, ಗೋಮೂತ್ರ ಬಳಸಿ ಹೊಸಬಗೆಯಲ್ಲಿ ದೀಪ ತಯಾರಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ತಯಾರಾದ 5 ಸಾವಿರ ದೀಪಗಳಲ್ಲಿ ಕೇವಲ ನೂರು ಮಾತ್ರವಷ್ಟೇ ಈಗ ಉಳಿದಿದೆ.

‘ಕಳೆದ 3 ವರ್ಷಗಳಿಂದ ಈ ರೀತಿ ದೀಪಗಳನ್ನು ತಯಾರಿಸಲಾಗುತ್ತಿದೆ. ಜೀವದಯಾ ಜೈನ್‌ ಚಾರಿಟಬಲ್‌ ಟ್ರಸ್ಟ್‌ನ ಸದಸ್ಯರು ದೀಪಗಳಿಗಾಗಿ ಸಗಣಿ ಮತ್ತು ಗೋಮೂತ್ರವನ್ನು ನೀಡಿದ್ದಾರೆ. ದೀಪಗಳ ಮಾರಾಟದಿಂದ ಬಂದ ಹಣವನ್ನು ಪ್ರಗತಿ ಬರ್ಡ್ ಚಾರಿಟ
ಬಲ್ ಆಸ್ಪತ್ರೆಗೆ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ‍ಪ್ರತಿಷ್ಠಾನದ ಅಧ್ಯಕ್ಷ ಡಾ.ಬಿ.ಕೆ.ಅಜಯಕುಮಾರ್‌ಜೈನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.