ಹಂದಿ ಬೇಟೆಗೆ ಯತ್ನಿಸಿರುವ ಹುಲಿಯ ಹೆಜ್ಜೆ ಗುರುತುಗಳು
ಎಚ್.ಡಿ.ಕೋಟೆ: ತಾಲ್ಲೂಕಿನ ಬೋಚಿಕಟ್ಟೆ ಹಳೆಯ ರಸ್ತೆಯ ಬಳಿ, ಹೆಬ್ಬಾಳ ಜಲಾಶಯದ ಹಿನ್ನೀರಿನಲ್ಲಿ ಹಸುವೊಂದನ್ನು ದಾಳಿ ಮಾಡಲು ಹುಲಿ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ರೈತ ಶಿವರಾಮೇಗೌಡರ ಕಣ್ಣೆದುರೇ ಎತ್ತನ್ನು ದಾಳಿ ಮಾಡಲು ಯತ್ನಿಸಿದ ಹುಲಿ, ರೈತರ ಚೀರಾಟಕ್ಕೆ ಭಯಭೀತಗೊಂಡು ಪಕ್ಕದ ಜಮೀನಿನ ಪೊದೆಗೆ ನುಸುಳಿದೆ ಎನ್ನಲಾಗಿದೆ.
‘ಜಾನುವಾರಗಳನ್ನ ಮೇಯಿಸುತ್ತಿದ್ದ ಹುಲಿ ದಾಳಿಗೆ ಯತ್ನಿಸಿದ್ದನ್ನು ಗಮನಿಸಿ ಚೀರಾಡಿದ್ದೇವೆ. ಬಳಿಕ ಹುಲಿಯು ರೈತ ಜಯಂತ್ ತೋಟದ ಬಳಿಯ ಪೊದೆಯೊಳಗೆ ಸೇರಿದೆ’ ಎಂದು ಶಿವರಾಮೇಗೌಡರು ತಿಳಿಸಿದರು.
ರೈತ ಜಯಂತ್ ಮಾತನಾಡಿ, ‘ಕಳೆದ ದಿನ ರಾತ್ರಿ ವೇಳೆ ಹುಲಿಯ ಹೆಜ್ಜೆ ಗುರುತುಗಳು ಜಮೀನಿನಲ್ಲಿ ಮೂಡಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಆದರೂ ಸಹ ಅರಣ್ಯ ಇಲಾಖೆ ಇತ್ತ ಗಮನ ಹರಿಸಿಲ್ಲ. ಬೋನನ್ನು ಸಹ ತಂದು ಇಟ್ಟಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.